ವರದಿ ಮುರಿಗೆಪ್ಪ ಮಾಲಗಾರ 
ಹಳ್ಳೂರ 17:ಹಳ್ಳೂರ ಗ್ರಾಮದಲ್ಲಿ ನೆಲೆ ನಿಂತಿರುವ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ 3 ಊರು ಗ್ರಾಮದ ಆರಾದ್ಯ ದೇವತೆಗಳಾದ ಆಧಿಶಕ್ತಿ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವವು 22/5/ 23 ರಂದು ಪ್ರಾರಂಭವಾಗಿ 30/5/23 ನಿರಂತರ 9 ದಿನಗಳವರೆಗೆ ಬ್ರಹತ್ ಪ್ರಮಾಣದಲ್ಲಿ ಜಾತ್ರೆ ಮಾಡಲು ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರು, ವಚನದಾರರು ಪೂರ್ವ ಭಾವಿ ಸಭೆ ನಡೆಸಿ ಸಮಯವನ್ನು ನಿಗದಿ ಮಾಡಿದ್ದಾರೆ. ಶ್ರೀ ಮಹಾಲಕ್ಷ್ಮೀದೇವಿ ಹಾಗೂ ದ್ಯಾಮವ್ವ ದೇವಿಯ ಜಾತ್ರೆ ಕಳೆದ 2005 ಮೇ /ಜೂನ್ ತಿಂಗಳಿನಲ್ಲಿ ಜಾತ್ರೆ ನಡೆದಿದ್ದು ಜಾತ್ರೆಯು ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಬ್ರಹತ್ ಪ್ರಮಾಣದಲ್ಲಿ ಪುರಾತನ ಕಾಲದಿಂದ ಜರುಗುತ್ತಾ ಬಂದಿರುತ್ತದೆ ಅನಿವಾರ್ಯ ಕಾರಣಗಳಿಂದ ಜಾತ್ರೆ ವಿಳಂಬವಾಗಿ ಈ ವರ್ಷ ಮೇ 22ರಂದು ಜಾತ್ರೆ ಪ್ರಾರಂಭವಾಗಲಿದೆ. ಮಂಗಳವಾರ ದಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜಾತ್ರೆಯ ಪೂರ್ವ ಭಾವಿ ಸಭೆಯಲ್ಲಿ ಜಾತ್ರೆಯ ರೂಪು ರೆಷೇಗಳ ಬಗ್ಗೆ ಚರ್ಚೆ ಮಾಡಿದರು. ದ್ಯಾಮವ್ವ ದೇವಿಯ ಹೊಸ ಮೂರ್ತಿಯನ್ನು ನಿರ್ಮಾಣ ಮಾಡಿ ಕಳಸ ಕಟ್ಟಲು ಸಭೆಯಲ್ಲಿ ಚರ್ಚೆ ಮಾಡಿದರು. ಮೂರೂರು ಗ್ರಾಮದ ಆರಾದ್ಯ ದೇವತೆಗಳ ಬ್ರಹತ್ ಪ್ರಾಮಾಣದಲ್ಲಿ ಜಾತ್ರೆ ನಡೆಯುವದರಿಂದ. ಹಾಗೂ ಲಕ್ಷಾಂತರ ಜನ ಕೂಡುವುದರಿಂದ ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ಸ್ಥಳಗಳನ್ನು ಸ್ವಚ್ಛತೆ ಹಾಗೂ ದುರಸ್ಥಿ ಮಾಡುವದು. ದೇವಸ್ಥಾನ ಸುತ್ತಮುತ್ತ ಫೇವರ್ಸ್ ಹಾಕುವುದು ಮತ್ತು ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಮಾಡುವುದನ್ನು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದೆ .ದೇವಸ್ಥಾನದ 4 ಬಾಗಗಳಲ್ಲಿ ಸುಮಾರು 5 ಎಕರೆ ಜಮೀನನ್ನು ಜಾತ್ರೆ ನಡೆಯುವ ಸಮಯಕ್ಕೆ ಕಾಲಿ ಮಾಡುವುದು. ಪಾರ್ಕಿಂಗ್ ವ್ಯವಸ್ಥೆ, ಅಂಗಡಿಕಾರರಿಗೆ ಉಚಿತವಾಗಿ ಅಂಗಡಿ ಇಡಲು ಸ್ಥಳ ನೀಡಲು ತೀರ್ಮಾನಿಸಲಾಗಿದೆ.ದ್ಯಾಮವ್ವ ದೇವಿ ಬಣ್ಣಕ್ಕೆ ಹೋದಮೇಲೆ ಏಪ್ರಿಲ ತಿಂಗಳಿನಲ್ಲಿ ಕಾಯಿ ಇಡುವುದರ ಬಗ್ಗೆ ಪ್ರಸ್ತಾಪ ಮಾಡಿದರು.ಜಾತ್ರೆಯಲ್ಲಿ ಪ್ರತಿ ದಿನ ಸಾದು ಸಂತರನ್ನು ಕರೆಸಿ ಸತ್ಸಂಗ ನಡೆಯಬೇಕು. ಹಾಗೂ ರಾಜಕೀಯ ಮುಖಂಡರನ್ನು ಕರೆಸಿ ಸಭೆ ಸಮಾರಂಭ ನಡೆಸುವುದರ ಬಗ್ಗೆ ಚರ್ಚೆ ಮಾಡಿದರು. ದೇವಸ್ಥಾನದ ನೀರಿನ ಟ್ಯಾಂಕ್ ಹತ್ತಿರವಿರುವ ಅಂಗಡಿಗಳನ್ನು ಮಾಲೀಕರು ಬೇರೆ ಕಡೆ ಸ್ಥಳಾಂತರ ಮಾಡಲು ಹಿರಿಯರು 2 ತಿಂಗಳ ಕಾಲಾವಕಾಶವನ್ನು ನೀಡಿದ್ದಾರೆ. ಎಲ್ಲರೂ ಸೇರಿ ಜಾತ್ರೆಯನ್ನು ಅಚ್ಚು ಕಟ್ಟಾಗಿ ಮಾಡುವದರ ಬಗ್ಗೆ ಚರ್ಚೆ ಮಾಡಿದರು.ಈ ಸಮಯದಲ್ಲಿ ಹಳ್ಳೂರ ಗ್ರಾಮದ ಎರಡು ದೈವ ಹಾಗೂ ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರಿದ್ದರು.