ಸ್ಥಳೀಯ ಡಾ. ಪದ್ಮಜಿತ ನಾಡಗೌಡರಿಗೆ ಟಿಕೆಟ್‌ಗೆ ಒತ್ತಾಯ*ಸ್ಥಳೀಯರಿಗೆ ಮಣೆ ಹಾಕದಿದ್ದಲ್ಲಿ ಕಾಂಗ್ರೆಸ್‌ಗೆ ಸೋಲು ನಿಶ್ಚಿತ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವೆ ಉಮಾಶ್ರೀಯವರು ತೇರದಾಳ ಕ್ಷೇತ್ರದಿಂದ ಪರಾಭವಗೊಂಡ ನಂತರ ಕ್ಷೇತ್ರದತ್ತ ತಿರುಗಿಯೂ ನೋಡದೆ ಪಕ್ಷದ ಮುಖಂಡರ ಹಾಗು ಕಾರ್ಯಕರ್ತರು ತೀವ್ರ ಸಂಕಷ್ಟ ಎದುರಿಸುವ ಸಂದರ್ಭ ಸ್ಥಳೀಯ ನೇತೃತ್ವ ವಹಿಸಿ ಕಾಂಗ್ರೆಸ್‌ನ ಬಲಿಷ್ಠಗೊಳಿಸುವ ಮೂಲಕ ಕಾರ್ಯಕರ್ತರಿಗೆ ಪ್ರೇರಣೆಯೊಂದಿಗೆ ನೆರೆ ಹಾವಳಿ, ಕೋವಿಡ್ ಸೇರಿದಂತೆ ಈಗಲೂ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷದ ಮೂಲಕ ಜನಸಾಮಾನ್ಯರ ಕಣ್ಣೊರೆಸುವಲ್ಲಿ ಯಶಸ್ವಿ ಕಂಡು ಪಕ್ಷ ಬಲವರ್ಧನೆಗೆ ಸಾಕ್ಷಿಯಾದ ಡಾ. ಪದ್ಮಜಿತ ನಾಡಗೌಡರಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಕ್ಷೇತ್ರದ ಕಾರ್ಯಕರ್ತರ ಹಾಗು ಮತದಾರರ ಒತ್ತಾಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಸೊರಗಾಂವಿ ಹೇಳಿದರು.
ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತೇರದಾಳ ಕ್ಷೇತ್ರದಲ್ಲಿ ಹಟಗಾರ ಹಾಗು ಕುರುಹಿನಶೆಟ್ಟಿ ಸಮಾಜದವರ ಮತಗಳು ಪ್ರಧಾನವಾಗಿದೆ. 
ನೇಕಾರರೆಂದು ಬಿಂಬಿಸಿ ದೇವಾಂಗ ಸಮಾಜದವರಾದ ಉಮಾಶ್ರೀಯವರಿಗೆ ಪಕ್ಷ ಟಿಕೆಟ್ ನೀಡಿತ್ತು. ಇಲ್ಲಿನ ಕಾಂಗ್ರೆಸ್ ಪಕ್ಷದ ಒತ್ತಾಯ ಕ್ಷೇತ್ರವಾದಾಗಿನಿಂದ ಕಳೆದ 2008 ರಿಂದ ಸ್ಥಳೀಯ ಅಭ್ಯರ್ಥಿಗೆ ಅವಕಾಶವೆಂಬ ಕೂಗಿತ್ತು. ಪಕ್ಷದ ವರಿಷ್ಠರು ಈ ಬಾರಿ ಮಹತ್ವವಾಗಿ ಗಮನಿಸಿ ಢೋಂಗಿ ಹಾಗು ನಾಟಕೀಯ ಮಾಡಿಕೊಂಡು ಅನ್ಯ ಕ್ಷೇತ್ರಗಳಿಂದ ಬರುವವರನ್ನು ತಡೆದು ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿದ್ದಲ್ಲಿ ಕ್ಷೇತ್ರಕಾಂಗ್ರೆಸ್ ಪಾಲಾಗುವದು ಇಲ್ಲವಾದಲ್ಲಿ ಮತ್ತೇ ಪರಾಭವದೊಂದಿಗೆ ತೇರದಾಳಪಕ್ಷವನ್ನು ಕೈಬಿಡುವಲ್ಲಿ ಕಾರಣವಾಗಲಿದೆ ಎಂದು ಸೊರಗಾಂವಿ ನೇರವಾಗಿ ತಿಳಿಸಿದರು.
ನೇಕಾರರಿಗೆ ಸಹಾಯವಾಗಿಲ್ಲ:
 ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಚಿವರಾದ ನಂತರ ಶ್ರೀಮತಿ ಉಮಾಶ್ರೀಯವರು ಕುಟುಂಬ ರಾಜಕಾರಣದೊಂದಿಗೆ ಕ್ಷೇತ್ರವನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಅಧಿಕಾರ ಕಳೆದುಕೊಂಡ ನಂತರ ಕ್ಷೇತ್ರದ ಯಾವದೇ ನೇಕಾರರಿಗೂ ಸ್ಪಂದಿಸದಿರುವದು ಬೇಸರವಾಗಿದೆ. 
ಸ್ಥಳೀಯ ಮುಖಂಡರಿಂದ ಕಾಂಗ್ರೆಸ್ ಪಕ್ಷ ಮತ್ತೆ ಪ್ರಬಲವಾಗಿದೆ. ಈ ಬಾರಿ ಸ್ಥಳೀಯರಿಗೇ ಟಿಕೆಟ್ ಎಂಬ ಸಂದೇಶ ಕಟ್ಟಕಡೆಯ ಜನತೆಯ ಆಶೆಯಾಗಿದ್ದು, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿರುವದು ಅದೇ ಉದ್ಧೇಶವಾಗಿದೆ ಎಂದರು.
ಸಮೀಕ್ಷೆಗಳಲ್ಲಿ ಮುಂದೆ :
ಬಿಜೆಪಿಯ ದುರಾಡಳಿತ ಹಾಗು ತೇರದಾಳ ಕ್ಷೇತ್ರದ ಶಾಸಕರ ಅಕ್ರಮ ಆಸ್ತಿ ಸೇರಿದಂತೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್‌ನಿಂದ ಡಾ. ಪದ್ಮಜೀತ ನಾಡಗೌಡರಾಗಿದ್ದು, ಹಲವಾರು ಸಮೀಕ್ಷೆಗಳ ವರದಿಯಲ್ಲಿಯೂ ಇವರದ್ದೇ ಸಿಂಹಪಾಲಾಗಿದೆ. ಹಿಂದುಳಿದ ವರ್ಗಗಳ ಒಲುವು ಹಾಗು ಗ್ರಾಮೀಣದಲ್ಲಿಯೂ ಸೇವಾಮನೋಭಾವದಿಂದ ಪಾರದರ್ಶಕ ಕಾರ್ಯಗಳಿಂದ ಬೇರುಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ಯಶಸ್ವಿ ಕಂಡಿದ್ದಾರೆಂದು ಸೊರಗಾಂವಿ ತಿಳಿಸಿದರು.
ಸಂಪರ್ಕವಿಲ್ಲ : ಕಳೆದೈದು ವರ್ಷಗಳಿಂದ ಸ್ಥಳೀಯ ಸಂಸ್ಥೆ, ಸಹಕಾರಿ ಕ್ಷೇತ್ರ ಸೇರಿದಂತೆ ಯಾವದೇ ಚುನಾವಣೆಗಳಲ್ಲಿ ಮಧ್ಯಸ್ಥಿಕೆ ವಹಿಸದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಕ್ಷೇತ್ರದಲ್ಲಿ ನಾಡಗೌಡರು ಮುಂಚೂಣಿ ಪಾತ್ರ ವಹಿಸಿ ಪಕ್ಷ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆಂದರು. ಇದೇ ಸಂದರ್ಭ ಕುರುಬ ಸಮಾಜದ ಮಾಳು ಹಿಪ್ಪರಗಿ, ನೇಕಾರ ಮುಖಂಡ ರವಿ ಬಾಡಗಿ, ನಗರಸಭಾ ಸದಸ್ಯ ಓಂಪ್ರಕಾಶ ಮನಗೂಳಿ, ಡಿಎಸ್‌ಎಸ್ ಮುಖಂಡ ಮಲ್ಲಪ್ಪ ಕಾಂಬಳೆ, ಶಂಕರ ಹಳಿಂಗಳಿ, ಕರಬಸು ಆರಗಿ, ಕಲ್ಲಪ್ಪ ಕರಲಟ್ಟಿ, ಅಣ್ಣಪ್ಪ ಬಾಣಕಾರ, ಕುಬೇರ ಸಾರವಾಡ, ಮಹೇಶ ಮಲಾಬದಿ, ಕುಮಾರ ಬಿಳ್ಳೂರ, ಚನಬಸು ಹಿತ್ತಲಮನಿ, ಸಂಜು ಅಮ್ಮಣಿ, ಬಸು ಕೊಪ್ಪದ, ಸಂತೋಷ ಚವನ್ನವರ ಸೇರಿದಂತೆ ಅನೇಕರಿದ್ದರು.