ರಾಮಾಚಾರಿಯ ಸಿಂಗಾಲಿಯ ಸೊಬಗಿನ ಗಾನ
ನಟ ತೇಜ್ ನಟಿಸಿ, ನಿರ್ದೇಶಿಸಿರುವ ರಾಮಾಚಾರಿ 2.0 ಚಿತ್ರದ ಸಿಂಗಾರಿಯ ಹಾಡು ಬಿಡುಗಡೆಯಾಗಿದೆ. ಆ ಮೂಲಕ ಚಿತ್ರತಂಡ ಸಿನಿಪ್ರಿಯರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಸಿಂಗಾರಿಯೇ ನೀ ಶೃಂಗಾರವು.. ಎಂಬ ಹಾಡು ಇದಾಗಿದ್ದು, ರಾಜೇಶ್ ಕೃಷ್ಣನ್ ಅವರ ಮಧುರ ದನಿಯಲ್ಲಿ ಮೂಡಿಬಂದಿದೆ. ಮಂಜು ದೊಡ್ಡನಿ ಸಾಹಿತ್ಯದ ಈ ಹಾಡಿಗೆ ಸುಂದರ್ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ತೇಜ್‌ ಹಾಗೂ ನಟಿ ಕೌಸ್ತುಬಾ ಮಣಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಸುಂದರದ ಸೊಬಗಿನಲ್ಲಿ ಚಿತ್ರದ ಹಾಡನ್ನು ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ಮಾಡ್ರನ್ ರಾಮಾಚಾರಿಯ ಸ್ಟೋರಿ ಇದ್ದು, ತೇಜ್ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಸಿಕೊಂಡಿದ್ದಾರೆ. ಕಿರುತೆರೆ ಬೆಡಗಿ ಕೌಸ್ತುಬಾ ಮಣಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ದೊಡ್ಡನೆ ಮಗ ರಾಘವೇಂದ್ರ ರಾಜ್‌ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಂದನಾ, ರೇಖಾ, ವಿಜಯ್ ಚೆಂಡೂರು ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ತೇಜ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಫೆಬ್ರವರಿ 24 ರಂದು ರಾಮಾಚಾರಿ 2.0 ಅದ್ದೂರಿಯಾಗಿ ತೆರೆಗೆ ಬರಲಿವೆ.