"ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ" ಎಂಬ ಹಾಡನ್ನು ಹಾಡಿದ್ದಾರೆ. ಉಪೇಂದ್ರ ಹಾಗೂ ಜಾಹ್ನವಿ ಆನಂದ್ ಹಾಡಿರುವ ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡು ಕೇಳಿ ಪ್ರಿಯಾಂಕ ಉಪೇಂದ್ರ ಅವರು, H20 ಚಿತ್ರದ "ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ" ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಸತೀಶ್ ರಾಜ್ ಅವರು ಡಾ||ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. 1990 ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು, ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ರಂಗಭೂಮಿ ನಂಟು ಇದೆ. ಅಶ್ವಿನಿ ಅರುಣ್ ಕೃಷ್ಣನ್ ಅವರ ಸಹ ನಿರ್ಮಾಣವಿರುವ ಈ ಚಿತ್ರದ
ನಾಯಕನಾಗಿ ಸಿದ್ದೇಶ್ ನಟಿಸಿದ್ದಾರೆ. ಆದ್ಯಪ್ರಿಯ, ರಚನ ಮಲ್ನಾಡ್, ವಿನೋದ್, ಡಿಂಗ್ರಿ ನಾಗರಾಜ್, ಗಣೇಶ್ ರಾವ್, ಸತೀಶ್ ರಾಜ್, ಪುಷ್ವ ಸ್ವಾಮಿ, ಲಯ ಕೋಕಿಲ, ಪವಿತ್ರ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

Social Plugin