ತಮ್ಮ ಸಂಸ್ಥೆಯ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸ್ಥೆಯು ಯಶಸ್ವಿಯಾಗಿ ಎಂಟನೇ ವರ್ಷಕ್ಕೆ ಪಾದರ್ಪಣೆ ಮಾಡಿಕೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯಿಂದ ಮಕ್ಕಳನ್ನು ಆದರ್ಶ ವಿಧ್ಯಾವಂತರನ್ನಾಗಿ ಮಾಡಲು ಪ್ರತಿದಿನ ಶ್ರಮವಹಿಸುತ್ತಿರುವ ತಮ್ಮ ಸಂಸ್ಥೆಯ ಶಿಕ್ಷಕರ ಬಗ್ಗೆ ಹಿರಿಮೆಯನ್ನು ವ್ಯಕ್ತ ಪಡಿಸಿದರು. ಸಂಸ್ಥೆಯಿಂದ ಹಜಾರೆ ಹಬ್ಬ ಎಂಬುದನ್ನು ಪ್ರತಿ ವರ್ಷವು ಏರ್ಪಡಿಸಿಕೊಂಡು ಶಾಲಾ ಮಕ್ಕಳು ಹಾಗು ಅವರ ಪಾಲಕರನ್ನು ಹಬ್ಬದಲ್ಲಿ ಬಾಗಿಯಾಗಿಸಿಕೊಂಡು ಸಂತಸದ ದಿನವಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದರು. ಇದೆ ಡಿಸೆಂಬರ್ ೨೩-೨೪ ಎರಡು ದಿನ ಹಜಾರೆ ಹಬ್ಬವನ್ನು ಆಚರಿಸಲು ಸಂಸ್ಥೆಯ ಆವರಣದಲ್ಲಿ ಬೃಹತ್ ವೇದಿಕೆಯನ್ನು ಸಿದ್ದಪಡಿಸಿ ಅಂದು ವಿಶೇಷ ಅಥಿತಿಗಳನ್ನು ಆಹ್ವಾನಿಸಿಕೊಂಡು ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೆರಿಸಲಾಗುವುದು ಎಂದು ಹೇಳಿದ್ದಾರೆ..
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ವಾಹಕರಾದ ಶ್ರೀಮತಿ,ಭಾರತಿ ತಾಳಿಕೋಟೆ, ಪ್ರಾಚಾರ್ಯ ಬಸವರಾಜ ಕಲಾದಗಿ, ಹಾಗು ಬಸವರಾಜ ದಲಾಲ್, ರವಿ ಜಮಖಂಡಿ, ವೆಂಕಟೇಶ ನಿಂಗಸಾನಿ, ಮಾದೇವ ಕೊಟ್ಯಾಳ, ಪ್ರಭು ಉಮ್ಮದಿ, ಡಾ; ದೀಪಾ ಡಂಗಿ, ಸೇರಿದಂತೆ ಅನೇಕರು ಹಾಜರಿದ್ದರು

Social Plugin