ಸುಪ್ರೀಂ ಕ್ರಿಯೇಷನ್ಸ್ ಎಂಬ ವೇದಿಕೆಯನ್ನು ಉತ್ಸಾಹಿ ಯುವಕರ ತಂಡ ಒಂದು ನಿರ್ಮಿಸಿದೆ ಹೊಸ ಬರಹಗಾರರನ್ನು ಹೊಸ ಗಾಯಕರನ್ನು ಪ್ರೋತ್ಸಾಹಿಸಿ ಮುನ್ನಲೆಗೆ ತರುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ ಸಾಹಿತಿ ಸಂಗೀತ ನಿರ್ದೇಶಕ ಹಾಗೂ ನಟರು ಆಗಿರುವಂತಹ ರಂಗನಾಥ್ ರವರ ಮುಂದಾಳತ್ವದಲ್ಲಿ ಈ ವೇದಿಕೆಯು ಮುನ್ನಡೆಯಲಿದೆ ಹಾಗೂ ಸಂಗೀತ ನಿರ್ದೇಶಕರಾದ ವಿ ಮನೋಹರ್ ರವರ ಸಹಕಾರವು ಸುಪ್ರೀಂ ಕ್ರಿಯೇಶನ್ಸ್ ಗೆ ಸಿಕ್ಕಿದೆ ಹೊಸ ಪ್ರತಿಭೆಗಳನ್ನು ಬೆಳೆಸುವ ಹಾದಿಯಲ್ಲಿ ಸಮಾಜಮುಖಿಯಾಗಿ ಕೆಲಸವನ್ನು ನಿರ್ವಹಿಸುತ್ತಿದೆ ಈಗಾಗಲೇ ಸುಪ್ರೀಂ ಕ್ರಿಯೇಶನ್ಸ್ ಗೆ ಚಾಲನೆ ದೊರೆತಿದ್ದು ಎರಡು ಆಲ್ಬಮ್ ಸಾಂಗ್ ಗಳು ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ ಮೊದಲ ಹಾಡಾಗಿ ನಾನೊಂದು ಆತ್ಮ ಜ್ಯೋತಿ ಸ್ವರೂಪ ಈ ಹಾಡನ್ನು ಹೊಸ ಗಾಯಕರದ ಪುರುಷೋತ್ತಮ್ ರವರು ಹಾಡಿದ್ದಾರೆ ಹಾಗೂ ಹೊಸ ಸಾಹಿತಿಗಳಾದ ರಂಗನಾಥ್ ರವರು ಹಾಡನ್ನು ಬರೆದಿದ್ದಾರೆ ಹಾಗೂ ಎರಡನೆಯ ಹಾಡಾಗಿ ಎಲ್ಲಿ ಹೋದೆ ಹೇಳು ಶಿವನೇ ಈ ಹಾಡನ್ನು ಯಾದಗಿರಿ ಮೂಲದ ನಿರೂಪ ಎಸ್ ಪಾಟೀಲ್ ರವರು ಈ ಹಾಡಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ ನಾಗರಾಜ್ ಎಂಬ ಹೊಸ ಗಾಯಕರು ಈ ಹಾಡನ್ನು ಹಾಡಿದ್ದಾರೆ ಮೂರನೇ ಹಾಡಿನ ತಯಾರಿ ನಡೆಯುತ್ತಿದೆ