ಶ್ರೀಅಲ್ಲಮಪ್ರಭು ದೇವಸ್ಥಾನದ ಕಟ್ಟಡಕ್ಕೆ 1ಲಕ್ಷ ರೂ. ದೇಣಿಗೆ
ತೇರದಾಳ 07: ಸುಕ್ಷೇತ್ರ ತೇರದಾಳದಲ್ಲಿರುವ ಪುರಾತನ ಹಾಗೂ ಜಾಗೃತ, ಜಾತಿ-ಮತ, ಪಕ್ಷ ಪಂಥಗಳಿಲ್ಲದೆ ಜಾತ್ಯಾತೀತವಾಗಿ, ಬೃಹತ್ ಪ್ರಮಾಣದಲ್ಲಿ ಭಕ್ತರನ್ನು ಹೊಂದಿದ. ಉತ್ತರ ಕರ್ನಾಟಕದಲ್ಲಿಯೇ ಶ್ರೇಷ್ಠವಾದ ದೇವಾಲಯಗಳಲ್ಲಿ ಒಂದಾದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ದೇವಸ್ಥಾನವೂ ಕೂಡ ಒಂದಾಗಿದೆ. ದೇವಸ್ಥಾನ ಚಾಲುಕ್ಯ ಶೈಲಿಯ ನೂತನ ಕಟ್ಟಡದ ಕಾರ್ಯ ಭರದಿಂದ ಸಾಗಿದೆ. ಈ ಕಟ್ಟಡದ ಸಲುವಾಗಿ ದೇವಸ್ಥಾನದ ಅರ್ಚಕರಾದ ಮಲ್ಲಿಕಾರ್ಜುನ ಗಣಾಚಾರಿ(ಪುಟ್ಟು ಸ್ವಾಮಿಗಳು) ಸಾ. ಮುಧೋಳ ಇವರು ಲಿಂ. ಶ್ರೀಮತಿ ಶಕುಂತಲಾ ಗಣಾಚಾರಿ ಇವರ ಸ್ಮರಣಾರ್ಥವಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದರು.
ದೇವಸ್ಥಾನವನ್ನು ಎಲ್ಲ ಭಕ್ತರ ಇಚ್ಚೆಯಂತೆ ಚಾಲುಕ್ಯ ಶೈಲಿಯಲ್ಲಿ ಹಾಗೂ ಭಾರತದಲ್ಲಿರುವ 12 ಜ್ಯೋತಿರ್ಲಿಂಗ ದೇವಾಲಯಗಳ ಮಾದರಿಯಲ್ಲಿ ಸುಮಾರು 5ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ದೇವಸ್ಥಾನವನ್ನು ಪೂರ್ತಿಯಾಗಿ ದೊಡ್ಡ ಬಳ್ಳಾಪುರದ ಒಳ್ಳೆಯ ಗುಣಮಟ್ಟದ ಕಲ್ಲುಗಳಿಂದ ಉಡುಪಿಯ ರಾಜಶೇಖರ ಹೆಬ್ಬಾರ ಇವರಿಂದ ನಿರ್ಮಾಣವಾಗುತ್ತಿದೆ. ದೊಡ್ಡ ಬಳ್ಳಾಪುರದ ಕಲ್ಲುಗಳನ್ನು ತಂದು ಕೆತ್ತನೆಯನ್ನು ಮಾಡಿ ಇವತ್ತಿನವರೆಗೆ ಉಪಪೀಠವನ್ನು, ಅನುಷ್ಠಾನವನ್ನು, ಗರ್ಭಗುಡಿ, ಹಾಗೂ ಸುಕಣಾಶಿಯನ್ನು ತಯಾರಿಸಲಾಗಿದೆ. ಮುಂದಿನ ಕಲ್ಲುಗಳ ಪೂರೈಕೆ, ಕೆತ್ತನೆ, ಜೋಡಿಸುವ ಹಾಗೂ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಕೆಲವೇ ತಿಂಗಳಲ್ಲಿ ದೇವಸ್ಥಾನದ ಕಟ್ಟಡ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶ್ರೀಅಲ್ಲಮಪ್ರಭು ದೇವಾಲಯದ ಜೀರ್ಣೋದ್ಧಾರ ಸಮೀತಿ ಟ್ರಸ್ಟ್ ನವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರವೀಣ ನಾಡಗೌಡ, ಪ್ರಕಾಶ ಕಾಲತಿಪ್ಪಿ, ಎಮ್.ಸಿ.ಕುಂಚಗನೂರ, ಅಲ್ಲಯ್ಯ ದೊಡಮನಿ, ಆಯ್.ಆಯ್.ಯಾದವಾಡ, ಮಗಿಪ್ರಭು ಪುರಾಣಿಕ, ಪರಯ್ಯ ಮೇಲಿನಮನಿ, ಬಸಯ್ಯ ಭಾಂವಿ, ಪರಯ್ಯ ಭಾಂವಿ, ಗುಹೇಶ್ವರ ಭಾಂವಿ, ಎಮ್.ಆಯ್. ನುಚ್ಚಿ, ಪ್ರಭು ಹೂಗಾರ, ಅನವೇಶ ಪುರಾಣಿಕ, ಸೌರಭ ಪುರಾಣಿಕ ಸೇರಿದಂತೆ ಇನ್ನಿತರರು ಇದ್ದರು.

Social Plugin