ಕರ್ನಾಟಕ ಮಾಳಿ ಮಾಲಗಾರ ಸಮಾಜದ ಪ್ರಮುಖರು ಸೋಮವಾರ ದಂದು ಬೆಂಗಳೂರ ಕಾವೇರಿ ನಿವಾಸದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನು ಭೇಟಿಯಾಗಿ ರಾಜ್ಯ ಮಟ್ಟದ ಸಮಾವೇಶದ ಕುರಿತು ಚರ್ಚೆ ಮಾಡಿದಾಗ ಮುಗ್ದ ಸ್ವಭಾವ ಹೊಂದಿರುವ ಮಾಳಿ,ಮಾಲಗಾರ ಸಮುದಾಯದ ಸಮಾವೇಶಕ್ಕೆ ಸರ್ವಾನುಮತದಿಂದ ಡಿಸೆಂಬರ್ 26 ರಂದು ಸಮಾವೇಶವನ್ನು ಇಟ್ಟುಕ್ಕೊಳ್ಳಿ ಬರುತ್ತೇನೆ ಎಂದು ಮುಖ್ಯಮಂತ್ರಿಯವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮಾತನಾಡಿ ಕರ್ನಾಟಕ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ವಾಸವಿರುವ ಉತ್ತರ ಕರ್ನಾಟಕದಲ್ಲಿ ಮಾಳಿ ಮಾಲಗಾರ ಎಂದೇ ಕರೆಯಲ್ಪಡುವ ವಿಶೇಷವಾಗಿ ಕೃಷಿ ಕಾಯಕ ಮಾಡುತ್ತಾ ಮುಗ್ದ ಸ್ವಭಾವ ಹೊಂದಿರುವ ಸಮುದಾಯದವರು ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಿರಿ ನಾನು ಕೂಡಾ ಮುಗಳಖೋಡದಲ್ಲಿ ಜರುಗುವ ಸಮಾವೇಶಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋನಾ ಎಂದರು. ಕೆ ಎಮ್ ಎಫ್ ಅಧ್ಯಕ್ಷರು ಹಾಗೂ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ರಾಜ್ಯ ಮಟ್ಟದ ಮಾಳಿ ಮಾಲಗಾರ ಸಮಾವೇಶಕ್ಕೆ ನನ್ನ ಬೆಂಬಲ ಸದಾಕಾಲ ಇರುತ್ತದೆ ಹಿಂದುಳಿದು ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಸಮಾವೇಶದ ಬಗ್ಗೆ ಪೂರ್ಣ ಜವಾಬ್ದಾರಿವಿದೆ ಎಂದರು. ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿನನ್ನ ಕ್ಷೇತ್ರ ಸುಕ್ಷೇತ್ರ ಮುಗಳಖೋಡಕ್ಕೆ ಮುಖ್ಯ ಮಂತ್ರಿ ಯವರು ಬರುತ್ತಿರುವುದು ಹೆಮ್ಮೆಯ ಸಂಗತಿ ಎಲ್ಲರೂ ಕೂಡಿ ಕಾರ್ಯಕ್ರಮ ಯಶಸ್ಸು ಗೊಳಿಸೋಣವೆಂದರು. ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ.
ಹಾಗೂ ಸಿದ್ದರಾಮಯ್ಯ. ಮತ್ತು ಎಚ್ ಡಿ ಕುಮಾರ ಸ್ವಾಮಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿ.ಸಿದ್ದು ಸವದಿ. ಮಹೇಶ ಕುಮಟಳ್ಳಿ ಸೇರಿದಂತೆ ಶಾಸಕ ಸಚಿವರಿಗೆ ಅಹ್ವಾನ ನೀಡಲಾಯಿತು. ಈ ಸಮಯದಲ್ಲಿ ಮಾಳಿ ಸಮಾಜದ ರಾಜ್ಯದ್ಯಕ್ಷ ಕಾಡು ಮಾಳಿ.ನಿಯೋಗಧ್ಯಕ್ಷ ಸಿ ಬಿ ಕೂಲಿಗೋಡ. ಶಂಕರ ಕೀವಟಿ. ಬಸವರಾಜ ಬಾಳಿಕಾಯಿ, ಗಿರೀಶ ಬೂಟಾಳಿ.ರಮೇಶ ಯಡವಣ್ಣವರ. ಸದಾಶಿವ ಹೊಸಮನಿ.ಬಸವರಾಜ ಕೊಕಟನೂರ. ಶ್ರೀಶೈಲ ಹಳ್ಳದಮಳ್ಳ.ಮಲ್ಲು ಬಾಳಿಕಾಯಿ. ಸಂಜು ಅಥಣಿ. ಮಹಾಂತೇಶ ಮಾಳಿ.ಮಹಾದೇವ ಚಮಕೇರಿ. ರವಿ ಬಕಾರಿ. ಮಹಾಂತೇಶ ಕುಂದರಗಿ ಸೇರಿದಂತೆ ಸಮಾಜದ ಪ್ರಮುಖರಿದ್ದರು.
Social Plugin