"ರಂಗಿತರಂಗ", " ಅವನೇ ಶ್ರೀಮನ್ನಾರಾಯಣ" ಹಾಗೂ ಪ್ರಸ್ತುತ "ಸ್ಪೂಕಿ ಕಾಲೇಜ್" ಚಿತ್ರಗಳ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಪುತ್ರಿ ದೀಕ್ಷಾ ಪಿ ಅವರ ವಿವಾಹ ಮಧುಕೀರ್ತಿ ಬಿ.ಕೆ ಅವರೊಂದಿಗೆ ಅದ್ದೂರಿಯಾಗಿ ನೆರವೇರಿತು. ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ, ವಧುವರರನ್ನು ಆಶೀರ್ವದಿಸಿದರು.