ಹಳ್ಳೂರ 13:ಸಮೀಪದ ತೇರದಾಳದಲ್ಲಿ ರವಿವಾರ ದಂದು ನಡೆದ ಅಖಿಲ ಕರ್ನಾಟಕ ಮಹಾತ್ಮ ಜ್ಯೋತಿಭಾ ಪುಲೆ ನಿಯೋಗ ಸಮಿತಿಯ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಮಾಳಿ, ಮಾಲಗಾರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಬಾಗಲಕೋಟ, ಬೆಳಗಾವಿ, ವಿಜಯಪುರ, ಗುಲಬುರ್ಗಾ, ಆಳಂದ ಬಾಗದ ರಾಜ್ಯದಲ್ಲಿರುವ ಮಾಳಿ, ಮಾಲಗಾರ ಸಮಾಜದ ಪ್ರಮುಖರು ಸೇರಿ ಮುಗಳಖೋಡ ದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಮಾಡಲು ತೀರ್ಮಾನಿಸಲಾಯಿತು.ಬ್ರಹತ್ ಪ್ರಮಾಣದ ಸಮಾವೇಶದಲ್ಲಿ ಲಕ್ಷಾಂತರ ಜನಸಂಖ್ಯೆ ಕೂಡುವ ನಿರೀಕ್ಷೆವಿದೆ ಕಾರ್ಯಕ್ರಮದ ರೂಪು ರೆಷೆಗಳ ಬಗ್ಗೆ ಚರ್ಚೆ ಮಾಡಿದರು. ಈ ಸಮಯದಲ್ಲಿ ಪ್ರಭು ಮಹಾರಾಜರು ನೇತೃತ್ವ ವಹಿಸಿದರು. ಮಾಳಿ, ಮಾಲಗಾರ ಸಮಾಜದ ಅಧ್ಯಕ್ಷ ಕಾಡು ಮಾಳಿ. ನಿಯೋಗದ ಅಧ್ಯಕ್ಷ ಸಿ ಬಿ ಕೂಲಿಗೋಡ. ಸದಾಶಿವ ಬೂಟಾಳಿ.ಶಂಕರ ಕೇವಟಿ.ಗಿರೀಶ ಬೂಟಾಳಿ.ತುಳಜಪ್ಪ ದೇಸ್ತೋಟ. ಡಾ ಶಂಕರ ಅಥಣಿ. ಪಂಡಿತ ಸೇರೇಕಾರ. ಸೋಮಲಿಂಗ ಮೇತ್ರೆ. ಎಮ್ ಬಿ ಮಾಳೇದ. ನೀಲಪ್ಪ ಕೇವಟಿ.ಮುರಿಗೆಪ್ಪಾ ಮಾಲಗಾರ. ಸದಾಶಿವ ಹೊಸಮನಿ.ಮಲ್ಲಿಕಾರ್ಜುನ ವನದೇ.ಮಲ್ಲು ಬಾಳಿಕಾಯಿ ಸೇರಿದಂತೆ ಸಮಾಜದ ಪ್ರಮುಖರಿದ್ದರು.