ವಿಶ್ವದೆಲ್ಲೆಡೆ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ದೊಡ್ಡ ಯಶಸ್ಸು ಕಂಡಿದೆ. ಇದೆ ಉತ್ಸಾಹದಲ್ಲಿ ಕನ್ನಡ ಚಿತ್ರರಂಗದ ಉದ್ಯೋನ್ಮುಖ ಭರವಸೆಯ ಯುವನಿರ್ದೇಶಕ ಅವಿರಾಮ್ ಒಂದು ದೊಡ್ಡ ಹೆಜ್ಜೆ ಇಡಲು ದಾಪುಗಾಲು ಇಟ್ಟಿದ್ದಾರೆ, ಹಿಂದೆ ಕನ್ನಡ ದೇಶದೊಳ್ ಹಾಗೂ ಕಲಿವೀರ ಎಂಬ ವಿಭಿನ್ನ, ಭರವಸೆ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವಿರಾಮ್ ಗೆ ಇದು ಮೂರನೇ ಹಾಗೂ ಮಹತ್ವದ ಸಿನಿಮಾ, ಇದುವರೆಗೂ ಯಾವ ಸಿನಿಮಾದಲ್ಲೂ ಹೇಳದ ಹೊಸ ವಿಷಯವನ್ನು ಆಯ್ಕೆಮಾಡಿಕೊಂಡಿದ್ದು ಈ ಚಿತ್ರದೊಂದಿಗೆ ನಿರ್ದೇಶಕ ಅವಿರಾಮ್ ರವರು ಹೊಸದೊಂದು ಮೈಲಿಗಲ್ಲು ಮುಟ್ಟುವ ಭರವಸೆಯಲ್ಲಿದ್ದಾರೆ. ದೊಡ್ಡ ನಿರ್ಮಾಣ ಸಂಸ್ಥೆಯಾಗಬೇಕೆಂಬ ಆಸೆಯೊಂದಿಗೆ ವಿದ್ಮಹಿ ಪ್ರೊಡಕ್ಷನ್ಸ್ ತನ್ನ ಚೊಚ್ಚಲ ಚಲನಚಿತ್ರ ಆಪರೇಷನ್_U ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಅದ್ದೂರಿಯಾಗಿ ಖಾತೆ ತೆರೆದು, ಕನ್ನಡ ಚಿತ್ರರಂಗಕ್ಕೆ ಹಾಗೂ ಪ್ರೇಕ್ಷಕರಿಗೆ ಹೊಸ ಬಗೆಯ ಸಿನಿಮಾ ನೀಡಲು ಯೋಜನೆ ರೂಪಿಸಿದೆ. ತುಮಕೂರು ಉದ್ಯಮಿಯಾದ ಆರ್. ಮಂಜುನಾಥ್ ಈ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ಬಹು ದೊಡ್ಡ ತಾರಾ ಬಳಗವಿದ್ದು ಮುಖ್ಯ ಹಾಗೂ ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ರವರು ನಟಿಸುತ್ತಿದ್ದು, ಇದೆ ಮೊದಲಬಾರಿಗೆ ರಾಘಣ್ಣ ರವರ ಧರ್ಮಪತ್ನಿ ಮಂಗಳಮ್ಮರವರು ಆರಂಭ ಫಲಕ(ಕ್ಲಾಪ್ ಬೋರ್ಡ್) ಹಿಡಿದು ಶುಭ ಹಾರೈಸಿದರು, ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿತು, ಇನ್ನು ಪ್ರಖ್ಯಾತ ಕಲಾವಿದರಾದ ರವಿ ಶಂಕರ್, ಯಶ್ ಶೆಟ್ಟಿ, ಅವಿನಾಶ್, ಧರ್ಮ, ಮಾಳವಿಕಾ ಅವಿನಾಶ್, ಸ್ಪರ್ಶ ರೇಖಾ ಹಾಗೂ ಹಾಸ್ಯ ನಟ ಜಿ ಜಿ ಎಲ್ಲರೂ ಚಿತ್ರಕ್ಕೆ ಮೆರಗು ನೀಡಿದ್ದಾರೆ, ನಾಯಕಿಯರಾಗಿ ಸೋನಲ್ ಮೊಂಟೆರಿಯೋ ಹಾಗೂ ಲಾಸ್ಯ ನಾಗರಾಜ್ ನಟಿಸುತ್ತಿದ್ದಾರೆ. ಮೊದಲಬಾರಿಗೆ ನಾಯಕ ನಟನಾಗಿ ಉತ್ತಮ್ ಪಾಲಿ ನಟಿಸುತ್ತಿದ್ದು, ಚಿತ್ರಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಚಿತ್ರ ರಂಗದಲ್ಲಿ ಭರವಸೆಯ ನಾಯಕ ನಟರಾಗುವ ಕನಸು ಹೊಂದಿದ್ದಾರೆ. ಈಗ ಹಾಡುಗಳ ಸಂಯೋಜನೆ ನಡೆಯುತ್ತಿದ್ದು, ರಾಘವೇಂದ್ರ ವಿ ರವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸಲುವಾಗಿ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಕ್ಯಾಮೆರಾ ಮ್ಯಾನ್ ಹಾಲೇಶ್ ರವರ ಕೈ ಚಳಕದೊಂದಿಗೆ, ಎ.ಆರ್. ಕೃಷ್ಣ ರವರ ಸಂಕಲನವಿರುತ್ತದೆ.