ನೇಕಾರ ಹಟಗಾರ ಸಮಾಜದ ಹಿರಿಯರು ಶ್ರೀ ರಾಜಶೇಖರ್ ಭೋಜ ಹಾಗೂ ಮಹಾಬಲೇಶ್ವರ ಹಟ್ಟಿಹೊಳಿ ಅವರ ಜೊತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ (ಜಡ್ಜ್) ಮಾನ್ಯ ಶ್ರೀ ಉಮೇಶ್ ಅತನುರೆ ಹಾಗೂ ನ್ಯಾಯಾಧೀಶರಾದ (ಜಡ್ಜ್) ಮಾನ್ಯ ಶ್ರೀಮತಿ ಅಶ್ವಿನಿ ಹಟ್ಟಿಹೊಳಿ ಅವರನ್ನು ಭೇಟಿಯಾಗಿ ಶ್ರೀ ಅಲ್ಲಮ ಪ್ರಭು ಚಲನಚಿತ್ರದ ಟ್ರೈಲರ್ ವೀಕ್ಷಿಸಿದರು. ಜೊತೆಗೆ ಇಂಚಗೇರಿ ಸಂಪ್ರದಾಯದ "ದೇವ ವಾಣಿ" ಪಾಕ್ಷಿಕ ಪತ್ರಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಜೊತೆಯಲ್ಲಿ ಚಲನಚಿತ್ರ ನಿರ್ಮಾಪಕ ಮಾಧವಾನಂದ ಶೇಗುಣಸಿ, ಶ್ರೀ ಬಿ. ಎಸ್ ಸೋಮರಾಜು (ಸೋಮಣ್ಣ), ಶ್ರೀಮತಿ ಭಾನುಮತಿ ಭೋಜ ಹಾಗೂ ಶ್ರೀ ಪ್ರಶಾಂತ್ ಹಳ್ಯಾಳ ಉಪಸ್ಥಿತರಿದ್ದರು.

Social Plugin