ತೇರದಾಳ : ಪಟ್ಟಣ ಮುಖ್ಯರಸ್ತೆಯಲ್ಲಿ ಮರಳು, ಕಡಿ ಕಟ್ಟಡ ಸಾಮಗ್ರಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಾರ್ವಜನಿಕರು ಪೇಟೆಗೆ ಹೋಗುವಾಗ ಪರದಾಡುವಂತಾಗಿದೆ ಅಲ್ಲದೆ, ಇಂದು ಮಹಿಳೆಯೊಬ್ಬರು ದ್ವಿಚಕ್ರವಾಹನದಿಂದ ಬಿದ್ದು ಗಾಯ ಮಾಡಿಕೊಳ್ಳುವ ಪರಿಸ್ಥಿತಿಯಾಗಿದೆ. ಇದು ಸುಮಾರು ತಿಂಗಳುಗಳಿಂದ ಪ್ರತಿ ದಿನ ಮುಖ್ಯ ರಸ್ತೆಯಲ್ಲಿ ಇದ್ದರು ಪುರಸಭೆಯ ಯಾರು ಗಮನಿಸದೆ ಓಡಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಂತಹ ಕಟ್ಟಡಗಳಿಗೆ ಅನುಮತಿ ನೀಡುವಾಗ ಕಟ್ಟಡ ನಿಯಮ ಅನುಸರಿಸಲು ತಿಳಿಸಿದ್ದಾರೋ ಇಲ್ಲವೋ? ಅಥವಾ ಜಾಣ ಕುರುಡರ ನಡೆಯೋ? ಅಥವಾ ಪರವಾನಗಿ ಪಡೆಯದೇ ಕಟ್ಟುತ್ತಿರುವ ಕಟ್ಟಡವೋ ಪುರಾಸಭೆ ಅಧಿಕಾರಿಗಳು ಗಮನಿಸಬೇಕು ಅಲ್ಲದೇ ಹೆಚ್ಚಿನ ಅನಾಹುತ ನಡೆಯುವ ಮುಂಚೆ ಈ ಮುಖ್ಯ ರಸ್ತೆಯ ವಾರ್ಡ್ ಮೆಂಬರ್ ಗಮನಿಸಿ ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.