ಬೈಕ್ ರ್ಯಾಲಿ ಒಳಗೊಂಡಂತೆ, ರಂಗೋಲಿ ಮತ್ತು ಪ್ರಬಂಧ ಸ್ಪರ್ಧೆ.
 ಆಚರಣೆ ಕಾರ್ಯಕ್ರಮಕ್ಕೆ ಮಾತ್ರ ಸಿಮಿತವಾಗಿರದೆ ದೇಶದ ರಕ್ಷಣೆಯಲ್ಲಿ ಗಮನವಿರಲಿ: ಡಾ ಸಿ.ಬಿ. ಕುಲಿಗೋಡ.
ಮುಗಳಖೋಡ: ೭೫ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಜೆಗಳನ್ನು ದೇಶಾಭಿಮಾನದತ್ತ ಕರೆದೊಯ್ಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಈ ಆಚರಣೆಯನ್ನು ಎಲ್ಲ ಯುವಕ ಯುವತಿಯರು ಸೇರಿದಂತೆ ದೇಶದ ಪ್ರಜೆಗಳಾದ ನಾವು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸದೆ ನಮ್ಮ ಜೀವ ಇರುವವರೆಗೂ ದೇಶದ ರಕ್ಷಣೆ ಮತ್ತು ಬೆಳವಣಿಗೆಯ ಬಗ್ಗೆ ಗಮನವಿರಬೇಕು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಚವಿವ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ. ಸಿ.ಬಿ.ಕುಲಿಗೋಡ ಹೇಳಿದರು. ಅವರು ಮುಗಳಖೋಡ ಪಟ್ಟಣದ ಡಾ ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ, ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್ ಘಟಕದ ಅಡಿಯಲ್ಲಿ ಆಜಾದ ಕಾ ಅಮೃತ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ದೇಶದ ರಕ್ಷಣೆಯಲ್ಲಿ ಯುವಕರ ಪಾತ್ರ ಎಂಬ ಪ್ರಬಂಧ ಮತ್ತು ರಂಗೋಲಿ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ‌ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ವಿ.ಎಂ.ಕರಡಿ ಮಾತನಾಡಿ ಪ್ರಬಂಧದ ಬರೆಯುವ ವಿದ್ಯಾರ್ಥಿಗಳಿಗೆ ಅದರ ನೀತಿ ನಿಯಮಗಳನ್ನು ತಿಳಿಸಿಕೊಟ್ಟರು.
ಶ್ರೀಮತಿ ಅನಿತಾ ಜಂಬಗಿ ಮತ್ತು ಎಸ್.ಬಿ.ಪಿರೋಜ ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು.
ನಂತರ ಎಲ್ಲ ವಿದ್ಯಾರ್ಥಿಗಳು ಸೇರಿ ಸುಮಾರು 200ಕ್ಕೂ ಹೆಚ್ಚು ಬೈಕ್ ತೆಗೆದುಕೊಂಡು ಬೈಕ್ ಗಳಿಗೆ ದೇಶದ ಬಾವುಟ ಕಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರ್ಯಾಲಿ ಮಾಡಲಾಯಿತು. ಈ ರ್ಯಾಲಿ ಕಾರ್ಯಕ್ರಮಕ್ಕೆ ಪಟ್ಟಣದ ಹಿರಿಯರು ಹಾಗೂ ನಿವೃತ್ತ ಶಿಕ್ಷಕ ಎ.ಆರ್. ಹುಣಸಿಕಟ್ಟಿ ಸರ್ ಹಾಗೂ ಸಂಸ್ಥಯ ಆಡಳಿತ ಮಂಡಳಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿಯವರು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಪ್ರೊ ಸಂಗಮೇಶ ಹಿರೇಮಠ ನಿರೂಪಿಸಿ ಪ್ರಾಚಾರ್ಯ ಪಿ.ಸಿ.ಕಂಬಾರ ಸ್ವಾಗತಿಸಿ ವಂದಿಸಿದರು.
ಈ ಸಂದರ್ಬದಲ್ಲಿ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರು, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎಲ್ಲ ಭೋದಕ ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.