ಬಿ ಸಿ ಡಿ ಸ್ಟುಡಿಯೋಸ್ ಸಂಸ್ಥೆ ಇಂದ ನಿರ್ಮಿಸಿದ "ಯದ್ಭಾವಂ ತದ್ಭವತಿ" ಕನ್ನಡ, ಚಲನಚಿತ್ರದ ಚಿತ್ರೀಕರಣ ಚನ್ನಪಟ್ಟಣ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣವನ್ನು ಮುಗಿಸಿ ಸೆನ್ಸಾರ್ ಮಂಡಳಿಯಿಂದ ಯು/ ಎ ಸರ್ಟಿಫಿಕೇಟ್ ಪಡೆದುಕೊಂಡಿರುತ್ತದೆ.
ಚಿತ್ರದಲ್ಲಿ ಅಮಿತ್ ರಾವ್ ಅವರೇ ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಹಾಗೂ ಛಾಯಾಗ್ರಾಹಕರಾಗಿ ಸುದೀಪ್ ಪೆಟ್ರಿಕ್,
ಸಂಗೀತ ನಿರ್ದೇಶಕ ರಾಕಿ ಸೋನು,
ಸಂಕಲನ ಶಿವರಾಜ್ ಮೆಹು ,
D I ಮತ್ತು Vfx ಸುಪ್ರೀತ್ ಬಿಕೆ,
ಸಾಹಿತ್ಯ ನವೀನ್ ರೈ,
ಕಾಸ್ಯೂಮ್ ಡಿಸೈನರ್ ರಶ್ಮಿ ಅನುಪ್ ರಾವ್,
ಸಹ ನಿರ್ಮಾಪಕರಾಗಿ R ಶ್ರೀನಿವಾಸ ಶೆಟ್ಟಿ,
ತಂಡದಲ್ಲಿದ್ದು ಇತ್ತೀಚೆಗೆ ನಡೆದ ರೋಷಿನಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಔರಂಗಬಾದ್ ಮಹಾರಾಷ್ಟ್ರ ದಲ್ಲಿ 24/07/2022 ರಂದು "ಅತ್ಯುತ್ತಮ ನಟ" ಪ್ರಶಸ್ತಿ ಮತ್ತು "ಅತ್ಯುತ್ತಮ ಕಥೆ" ಪ್ರಶಸ್ತಿಯನ್ನು ಅಮಿತ್ ರಾವ್ ರವರು ಪಡೆದುಕೊಂಡಿರುತ್ತಾರೆ. ಹಲವಾರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ಗಳಲ್ಲಿ ಈಗಾಗಲೇ 36 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಈಗ ಪಡೆದಿರುವ 2 ಪ್ರಶಸ್ತಿಗಳನ್ನು ಸೇರಿಸಿ 38 ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದೆ ಕನ್ನಡದ ಯದ್ಭಾವಂ ತದ್ಭವತಿ ಚಿತ್ರ.

Social Plugin