ತೇರದಾಳ ಪಟ್ಟಣದ ಶ್ರೀ ನೀಲಕಂಠೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಂಗೋಲಿಯಲ್ಲಿ ಬಿಡಿಸಿದ ವಿಜ್ಞಾನದ ಮಾದರಿಗಳು ಹಾಗೂ ಮುಖ್ಯ ಶಿಕ್ಷಕ ಶಂಕರ ತಿಗಣಿ.

ರಂಗೋಲಿಯಲ್ಲಿ ವಿಜ್ಞಾನದ ಮಾದರಿಗಳು :ಸೃಜನಾತ್ಮಕತೆಗೊಂದು ಸಲಾಂ 

ತೇರದಾಳ ; ಶಿಕ್ಷಕ ಮಕ್ಕಳಿಗೆ ಆದರ್ಶಪ್ರಾಯ ಈ ನಿಟ್ಟಿನಲ್ಲಿ ಪಟ್ಟಣದ ನೀಲಕಂಠೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಮಾದರಿಗಳನ್ನು ರಂಗೋಲಿಯಲ್ಲಿ ಬಿಡಿಸುವುದರೊಂದಿಗೆ ಸೃಜನಾತ್ಮಕ ತಳಹದಿಯಲ್ಲಿ ಕಲಿಕೆಯ ಆಯಾಮವನ್ನು ಅಳವಡಿಸಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ.

         ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ಅಂಕಪಡೆಯುವುದರೊಂದಿಗೆ ಜಿಲ್ಲೆಯ ತುಂಬೆಲ್ಲ ಮನೆಮಾತಾಗಿದ್ದ ನಿಲಕಂಠೇಶ್ವರ ಪ್ರೌಢ ಶಾಲೆಯು ಪ್ರಸಕ್ತ ಸಾಲಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಈಗಿನಿಂದಲೇ ಪ್ರಯತ್ನವನ್ನು ಪ್ರಾರಂಭಿಸಿರುವ ಶಿಕ್ಷಕರು ಮಕ್ಕಳಿಗೆ ವಿವಿಧ ರಿತಿಯ ಚಟುವಟಿಕೆಗಳನ್ನು ನೀಡುವುದರ ಮೂಲಕ ಕಲಿಕೆಯಲ್ಲಿ ಉತ್ಸುಕರಾಗುವಂತೆ ಪ್ರೇರೇಪಿಸುತ್ತಿರುವುದು ಪ್ರಶಂಸನೀಯ.

           ಶಿಕ್ಷಕರು ಶಾಲಾವಧಿಯಲ್ಲಿ ಮಕ್ಕಳಿಗೆ ಪಾಠ ಬೋೀಧನೆಯೊಂದಿಗೆ ವಿಷಯವಾರು ವಿವಿಧ ಸೃಜನಾತ್ಮಕ ಚಟುವಟಿಕೆಗಳಾದ ಕ್ವೀಜ್,ಸೆಮಿನಾರ್,ಪ್ರಾತ್ಯಕ್ಷಿಕೆ ನಿರೂಪನೆ,ರಸಪ್ರಶ್ನೆ ಕಾರ್ಯಕ್ರಮ,ಮಾದರಿ ಪ್ರಶ್ನೆ ಪತ್ರಿಕೆಯ ವಿಶ್ಲೇಷನೆ,ಘಟಕ ಸರಣಿಗಳು,ಗುಂಪು ಚರ್ಚೆ,ಸಮಾಲೋಚನಾ ಪಾಠಗಳು,ಚಂದನ ಪಾಠಗಳ ವಿಕ್ಷಣೆ,ಇಲಾಖಾ ಕ್ವೀಜ್‍ಗಳಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ,ವಿದ್ಯಾರ್ಥಿಗಳ ಮನೆ-ಮನೆ ಭೇಟಿ ಹೀಗೆ ಹತ್ತು ಹಲವಾರು ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಮಕ್ಕಳನ್ನು ಕಲಿಕೆಯಲ್ಲಿ ಅಭಿಪ್ರೇರಣೆಗೊಳ್ಳುವಂತೆ ಮಾಡುವುದರೊಂದಿಗೆ ರಜಾ ಅವಧಿಯಲ್ಲಿಯೂ ಕೂಡ ಮಕ್ಕಳು ಮನೆಯಿಂದಲೇ ಕಲಿಕೆಯಲ್ಲಿ ಲವಲವಿಕೆಯಿಂದಪಾಲ್ಗೊಳ್ಳುವಂತೆ ಪ್ರೇರೇಪಿಸಲು ಆನ್ಲೈನ್ ಮೂಲಕ ರಂಗೋಲಿಯಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸುವ ಸ್ಪರ್ಧೆ,ವಿಜ್ಞಾನ ಮಾದರಿ ಪ್ರಯೋಗಗಳ ಚಿತ್ರ ನಿರೂಪನೆ ಹೀಗೆ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಮಕ್ಕಳು ಕಲಿಕೆಯಲ್ಲಿ ನಿರಂತರವಾಗಿ ಪಾಲ್ಗೊಂಡು ಉತ್ತಮ ಜ್ಞಾನಾರ್ಜನೆಯನ್ನು ಹೊಂದುವಂತೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯೋಪಾಧ್ಯಾಯ ಶಂಕರ ತಿಗಣಿ ನೇತೃತ್ವದ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದ್ದು ಅವರ ಕ್ರೀಯಾಶಿಲತೆಗೊಂದು ಸಲಾಂ.

         ಸಿಬ್ಬಂದಿಯ ಈ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷರಾದ ಶಿವಶಂಕರ ಶ್ರೀಗಳು ಹಾಗೂ ಆಡಳಿತ ಮಂಡಳಿಯ ಸರ್ವಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

------------------------------------------------