*ಬೀರೇಶ್ವರ ಸೊಸೈಟಿ ಸಿಬ್ಬಂದಿಗೆ ವೇತನ ಹೆಚ್ಚಳ ಆದೇಶ ಪತ್ರ ವಿತರಣೆ*
ಸಂಸದ ಅಣ್ಣಾಸಾಹೇಬ್ ಜೋಲ್ಲೆ ಮತ್ತು ಸಚಿವೆ ಶಶಿಕಲಾ ಜೊಲ್ಲೆರವರ ಉದ್ಯೋಗ ಸಮೂಹ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಬೀರೇಶ್ವರ್ ಕೋ-ಆಪ್ ಸೋಸೈಟಿ ಶಾಖೆಗಳು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ತಲೆಯೆತ್ತಿ ನಿಂತಿದೆ ಸಾವಿರಾರು ಕುಟುಂಬಗಳಿಗೆ ಆಸರೆಆಗಿದೆ ಸೊಸೈಟಿಯ ಸಿಬ್ಬಂದಿಗೆ ಸೇಕಡಾ 44ರಷ್ಟು ವೇತನ ಹೆಚ್ಚಳ ಮಾಡಿ ಸಿಬ್ಬಂದಿ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ ಎಂದು ಶ್ರಿ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸೈಟಿ ಶಾಖೆ ರಬಕವಿಯ ಅಧ್ಯಕ್ಷರಾದ ಧರೆಪ್ಪ ಉಳ್ಳಾಗಡ್ಡಿ ಹೇಳಿದರು.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಬೀರೇಶ್ವರ ಸೊಸೈಟಿ ಶಾಖೆಯ ಸಿಬ್ಬಂದಿಗೆ ವೇತನ ಪ್ರಮಾಣ ಪತ್ರ ಹಂಚುವ ಕಾರ್ಯಕ್ರಮ ನಡೆಯಿತು. 

ಕರೊನ ಮತ್ತು ಪ್ರವಾಹ ಬಂದಂಥ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಸೋಸೈಟಿ ಬಡವರಿಗೆ ಸಾಕಷ್ಟು ಸಹಾಯ ಮಾಡಿ ಮತ್ತು ಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಕ್ರೆಡಿಟ್ ಸೊಸೈಟಿಯ ಸದಸ್ಯರಾದ ಪರಪ್ಪ ಪೂಜಾರಿ. ಪರಶುರಾಮ ಕಾಖಂಡಿಕಿ. ಮಹಾಂತೇಶ ಗುಂಡಿ. ಸುನಿಲ ಮಮದಾಪುರ. ಜಗದೀಶ ಕೊನ್ನೂರ. ರವೀಂದ್ರ ಗಡಾದ. ಬಸವರಾಜ ಗೋಪಾಳೆ. ಚಂದ್ರಶೇಖರ ಬುಯಾರ. ಅಶೋಕ ಕೋತಿನ. ಮಲ್ಲಪ್ಪ ಚೌಗಲಾ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು

ಪ್ರಕಾಶ ಕುಂಬಾರ
ಬಾಗಲಕೋಟೆ