ವರದಿ ಮುರಿಗೆಪ್ಪ ಮಾಲಗಾರ ಬಂಡಿಗಣಿ 19:ಕಾಶಿ ಕ್ಷೇತ್ರ ಶ್ರೇಷ್ಠವಿದ್ದಂತೆ ಸವದಿಯಲ್ಲಿ ಹರಿಯುವ ಕೃಷ್ಣ ನದಿಯು ಶ್ರೇಷ್ಠತೆಯನ್ನು ಪಡೆದಿದೆ.ಶ್ರೇಷ್ಠವಾದ ಮಾನವ ಜನ್ಮವನ್ನು ಹಾಳು ಮಾಡಿಕೊಳ್ಳದೆ ಸುಳ್ಳು ತುಡುಗ ಬಿಟ್ಟು ಅಖಂಡ ದೇವರ ನಾಮಸ್ಮರಣೆ ಮಾಡಿ ಸಮರ್ಥ ಸದ್ಗುರುವಿನ ಮಾರ್ಗದರ್ಶನದಲ್ಲಿ ಸಾಗಿ ಅಜ್ಞಾನ ಕೇಡಾಗಿ ಜ್ಞಾನವನ್ನು ಉದಯಿಸಿಕೊಂಡು ಮಾನವ ಜನ್ಮವನ್ನು ಉದ್ದಾರಮಾಡಿಕೊಳ್ಳಿರೆಂದು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಅಥಣಿ ತಾಲ್ಲೂಕಿನ ಜನ್ಮಸ್ಥಳವಾದ ಸವದಿ ಗ್ರಾಮದಲ್ಲಿ 71 ನೇ ಹುಟ್ಟುಹಬ್ಬದ ನಿಮಿತ್ಯ ಗಂಗಾ ದೇವಿ ಉಡಿತುಂಬುವದು , ಹಾಗೂ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದೇಹ ನಮ್ಮದಲ್ಲ ಒಂದಿನ ಬಿಟ್ಟು ಹೋಗುವ ಶರೀರವನ್ನು ಮೆಚ್ಚಿ ನಡೆಯಬೇಡಿ. ಜಾತಿ ಗುರುವಿನ ನಂಬದೆ ನೀತಿ ಧರ್ಮದ ಬೋಧನೆ ಮಾಡುವ ಸಮರ್ಥ ಧರ್ಮದ ಗುರುವಿನನ್ನು ಪೂರ್ಣವಾಗಿ ನಂಬಿ ನಡೆಯಿರಿ.ಸತತವಾಗಿ ದೇವರ ಧ್ಯಾನ ಮಾಡಿದರೆ ಬಂದ ಕಷ್ಟ ಬಯಲಾಗಿ ಜೀವನವು ಸುಖಮಯವಾಗುತ್ತದೆ.
ಆದ್ಯಾತ್ಮ ಜ್ಞಾನವು ವಿಜ್ಞಾನಕ್ಕಿಂತ ಹೆಚ್ಚಿನದು. ಪರಿಶುದ್ಧವಾದ ಮನಸ್ಸಿನಲ್ಲಿ ಸದಾ ದೇವರ ವಾಸವಿರುತ್ತದೆ ಎಂದು ಹೇಳಿದರು. ಕಪರಟ್ಟಿ ಬಸವರಾಜ ಶ್ರೀಗಳು ಮಾತನಾಡಿ ಗುರುವಿನ ಮಹಿಮೆ ತಿಳಿಯಬೇಕಾದರೆ ಭಕ್ತಿ ಮಾಡಿದಾಗ ಮಾತ್ರ ಸಾಧ್ಯ.12 ನೇ ಶತಮಾನದಲ್ಲಿ ಅನುಭವ ಕಲ್ಯಾಣದಲ್ಲಿ ಬಸವಣ್ಣನವರು ನಡೆಸುತ್ತಿದ್ದರು. ಕಲಿಯುಗದಲ್ಲಿ ದಾನೇಶ್ವರ ಶ್ರೀಗಳು ಅನುಭವ ನಡೆಸಿ ಭಕ್ತರನ್ನು ಉದ್ದಾರ ಮಾಡುತ್ತಿದ್ದಾರೆ ಎಂದರು. ಬಾಗಲಕೋಟ ಮಾಜಿ ಜಿ, ಪ, ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ ಶಕ್ತಿ,ಯುಕ್ತಿ, ಮುಕ್ತಿ,ನಡೆಯುವದು ಪರಮಾತ್ಮನಿಂದ ಮಾತ್ರ ಸಾಧ್ಯ. ಬ್ರಹತ ಪ್ರಮಾಣದ ಭಕ್ತ ಸಮೂಹವನ್ನು ಹೊಂದಿ ಧಾರ್ಮಿಕ ಕಾರ್ಯವನ್ನು ದಾನೇಶ್ವರ ಶ್ರೀಗಳು ಮಾಡುತ್ತಿರುವದರಿಂದ ಜಗತ್ತು ಉದ್ದಾರವಾಗುತ್ತಿದೆ ಎಂದರು. ದಾನೇಶ್ವರ ಶ್ರೀಗಳನ್ನು ತುಳಜಾಪುರ ಅಂಬಾಭವಾನಿ ದೇವಸ್ಥಾನ ಅರ್ಚಕರು ಹಾಗೂ .ಯಡೂರ.ಸವದಿ, ಗುಲಬುರ್ಗಾ ಸೇರಿದಂತೆ ಅನೇಕ ಗ್ರಾಮದ ಭಕ್ತರು ಸನ್ಮಾನಿಸಿ ಸತ್ಕರಿಸಿದರು. ಗಂಗಾದೇವಿ ಹೆಸರಿನಲ್ಲಿ ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಹೋಳಿಗೆ, ಹುಗ್ಗಿ ಸೇರಿದಂತೆ ಪಂಚಾಮೃತ ಊಟದ ವ್ಯವಸ್ಥೆ ನಡೆಯಿತು. ಪ್ರಾರಂಭದಲ್ಲಿ ಕೃಷ್ಣ ನದಿ ದಡದಲ್ಲಿ ದೇವಾದಿಗಳ ಅಭಿಷೇಕ ವಿಶೇಷ ಪೂಜೆ ನೆರವೇರಿಸಿ, ಸತ್ಯನಾರಾಯಣ ವರದ ಶಂಕರ ಪೂಜೆ ನಡೆಯಿತು. ಇದೆ ಸಂದರ್ಭದಲ್ಲಿ ತುಳಜಾಪುರ ಅಂಬಾ ಭವಾನಿ ದೇವಸ್ಥಾನ ಧರ್ಮಾಧಿಕಾರಿ ದಿಗ್ವಿಜಯ ಪಾಟೀಲ. ತುಳಜಾಪುರ ನಗರ ಸೇವಕ ಅಮರದಾಜೆ ಹಂಗಳೆಕರ. ಸಿದ್ರಾಮ ಬಿರಾಜದಾರ.ಉತ್ತೂರದ ಮಾತೋಶ್ರೀ. ಶಾಂತಮ್ಮ ತಾಯಿ ಬಿಲಕುಂದಿ. ವಿಜಯ ವೇದಾಂಗ ಶ್ರೀಗಳು.ರಾಚನಗೌಡ ಪಾಟೀಲ. ಅಡವಯ್ಯಾ ಅರಳಿಕಟ್ಟಿಮಠ. ಶಂಕರ ನಂದಗಾಂವ. ಡಾ ಭರತ ಲೋನಾರ. ಕರೆಪ್ಪ ದಡ್ಡಿಮನಿ.ನ್ಯಾಯವಾದಿ ವೀಣಾ ಹೂಗಾರ.ಸುನಿಲ ಉಪಾದ್ಯೆ ಮಾರುತಿ ದೊಡಮನಿ.ಮಲ್ಲಪ್ಪ ತವನಿಧಿ.ಸೇರಿದಂತೆ ಭಕ್ತರಿದ್ದರು.

Social Plugin