ತೇರದಾಳ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಕೈಗೊಂಡಿರುವ ತಮದಡ್ಡಿ ನಿರಾಶ್ರಿತರ ಪುನರ್ವಸತಿ ಕಾಮಗಾರಿಯನ್ನು ವಿರೋಧಿಸಿ ಧರಣಿ ನಿರತ ನೂರಾರು ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿದರು. 




ಮೇಲಿನ ವಿಡಿಯೋ ನೋಡಿ👆

 ಪ್ರತಿಭಟನಾಕಾರರನ್ನು ಬಂಧಿಸಿದ ಪೋಲೀಸರು: ಮುಗಿಲು ಮುಟ್ಟಿದ ಆಕ್ರೋಶ 

ಸೀಮೆ ಎಣ್ಣೆ ಸೇವಿಸಿ ಆತ್ಮ ಹತ್ಯೆಗೆ ಯತ್ನ - ಪೋಲೀಸ್ ದೌರ್ಜನ್ಯಕ್ಕೆ ಖಂಡನೆ 


ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಕೈಗೊಂಡಿರುವ ತಮದಡ್ಡಿ ನಿರಾಶ್ರಿತರ ಪುನರ್ವಸತಿ ಕಾಮಗಾರಿಯನ್ನು ವಿರೋಧಿಸಿ ಧರಣಿ ನಿರತ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿದ ಘಟಣೆ ನಡೆಯಿತು.

    ಜಾಗ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುವುದಾಗಿ ಒಂದು ಬಣ-ಜಾಗ ನೀಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತೊಂದು ಬಣ ಹೀಗೆ ಕಳೆದ ಒಂದು ತಿಂಗಳಿನಿಂದ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾದ ಹಳಿಂಗಳಿ-ತಮದಡ್ಡಿ ಗ್ರಾಮಸ್ಥರ ಪುನರ್ವಸತಿ ಕೇಂದ್ರದ ಕದನ ಇಂದು ನೂರಾರು ಸಂಖ್ಯೆಯ ಪೋಲೀಸ್ ಬಿಗಿ ಬಂದೂ ಬಸ್ತ್‍ನಲ್ಲಿ ಆಗಮಸಿದ ಡಿವೈಎಸ್‍ಪಿ ಎಮ್ ಪಾಂಡುರಂಗಯ್ಯಾ ನೇತೃತ್ವದ ತಂಡ ನಿಯೋಜಿತ ಸ್ಥಳದಲ್ಲಿ ಧರಣಿ ನಿರತ ಹಳಿಂಗಳಿ ಗ್ರಾಮಸ್ಥರನ್ನು ಬಂಧಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಮಳೆಯನ್ನು ಲೆಕ್ಕಿಸದೆ ಧರಣಿ ನಿರತ ಗ್ರಾಮಸ್ಥರು : ಮಂಗಳವಾರ ರಾತ್ರಿ ಭದ್ರಗಿರಿ ಬೆಟ್ಟದ ರಸ್ತೆಯಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ರಾತ್ರಿಯಿಡಿ ಮಳೆ, ಚಳಿಯನ್ನದೆ ಗ್ರಾಮಸ್ಥರು ರಾತ್ರಿಯನ್ನು ಕಳೆದರು. ಬುಧುವಾರ ಬೆಳ್ಳಂಬೆಳಗ್ಗೆ ದೌಡಾಯಿಸಿದ ಪೋಲಿಸರು ಕಾರ್ಯಾಚರಣೆ ಕೈಗೊಂಡರು.


ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನ: ಧರಣಿ ನಿರತರ ನೂರಾರು ಮಹಿಳೆಯರು ಕೈಯಲ್ಲಿ ಸೀಮೆ ಎಣ್ಣೆಯ ಬಾಟಲಿಗಳನ್ನು ಹಿಡಿದು, ಮೈತುಂಬ ಸಿಂಪಡಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಸಂಗದ ನಡುವೆ  ಓರ್ವ ಮಹಿಳೆ ಸೀಮೆ ಎಣ್ಣೆಯನ್ನು ಸೇವಿಸಿ ಅಸ್ಥವ್ಯಸ್ಥಗೊಂಡ ಘಟನೆ ಜರುಗಿತು. 

ಪೋಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ: ಶಾಂತ ರೀತಿಯಿಂದ ಧರಣಿ ನಡೆಸುತ್ತಿದ್ದ ನಮ್ಮವರನ್ನು  ಕನಿಷ್ಠ ಪಕ್ಷ ಸೌಜನ್ನಕ್ಕಾದರು ಮಾತನಾಡಿಸದ ಪೋಲೀಸರು ಏಕಾಏಕಿ ಮಹಿಳೆಯರೆನ್ನದೆ ಧನಗಳಂತೆ ಎಳೆದಾಡಿ ಬಂಧಿಸಿರುವುದು ಅಮಾನವೀಯ, ಘಟಣೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟಣಾಕಾರರು  ಬಂಧಿಸಿರುವ ನಮ್ಮವರನ್ನು ಕೂಡಲೆ ಬಿಡುಗಡೆಮಾಡಬೇಕು ಹಾಗೂ ನಮ್ಮ ಬೇಡಿಕೆಗಳನ್ನು ಪರಿಗಣಿಸಿ ಪ್ರಾರಂಭಿಸಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ನಮ್ಮೂರಿನ ಜಾಗ ನಮ್ಮವರಿಗೆ ಮೀಸಲಿಡಬೇಕೆಂದು ಆಗ್ರಹಿಸಿ ತೇರದಾಳ ಪೋಲೀಸ್ ಠಾಣೆಯ ಮುಂದೆ ಧರಣಿ ಕುಳಿತರು.

           ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಬಂಧಿಸಲಾದ ಪ್ರತಿಭಟನಾಕಾರರನ್ನು ಸಮೀಪದ ಮಹಾಲಿಂಗಪೂರ ಠಾಣೆಯಲ್ಲಿಡಲಾಗಿದೆಯಂದು ಮಾಹಿತಿ ಪಡೆಯಲಾಯಿತು.

            ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಜನ ಪಾಲ್ಗೊಂಡಿದ್ದರು, ಕಾರ್ಯಾಚರಣೆಯಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ಗ್ರೇಡ್2 ತಹಶೀಲ್ದಾರ ಎಸ್.ಬಿ ಕಾಂಬಳೆ, ಉಪತಹಶೀಲ್ದಾರ ಶ್ರೀಕಾಂತ ಮಾಯಣ್ಣವರ,ಪ್ರಭಾರಿ ಆಹಾರ ನಿರೀಕ್ಷಕ ಪಿ.ಎಸ್ ಮಠಪತಿ, ಸಿಪಿಆಯ್ ಜೆ.ಕರುಣೇಶಗೌಡ ಸೇರಿದಂತೆ ಜಿಲ್ಲೆಯ ಉಳಿದ ನಾಲ್ಕು ಜನ ಸಿಪಿಆಯ್ ಹಾಗೂ ತೇರದಾಳ ಠಾಣಾಧಿಕಾರಿ ರಾಜು ಬೀಳಗಿ ಒಳಗೊಂಡಂತೆ ಜಿಲ್ಲೆಯ ಎಲ್ಲಾ ಪೋಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.