ರಾಸಾಯನಿಕ ರಹಿತ ಬೆಲ್ಲ ....

👉ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698
ಸಾವಯುವ ಕೃಷಿಯನ್ನೇ ಬದುಕಾಗಿಸಿಕೊಂಡ ಈ ಭಾಗದ ಕೆಲ ರೈತರು ಸಕ್ಕರೆ ಕಾರ್ಖಾನೆಗಳ ತೀವ್ರ ಪೈಪೋಟಿ ನಡುವೆಯೂ ಸಾವಯುವ ಬೆಲ್ಲ ತಯಾರಿಸಿ ದೇಶದ ನಾನಾ ರಾಜ್ಯಗಳಿಗೆ ರಫ್ತಾಗುತ್ತಿರುವ ಬಾಗಲಕೋಟೆ ಜಿಲ್ಲೆಯ ರಾಸಾಯನಿಕ ರಹಿತ ಬೆಲ್ಲ.ಕಬ್ಬು ಬೆಳೆದ ರೈತರು ದರ ನಿಗದಿ ಹೋರಾಟ ನಡೆಸಿದರೆ,ಇತ್ತ ಕೆಲವರು ಸಾವಯುವ ಬೆಲ್ಲ ತಯಾರಿಸಿ ದೇಶದ ನಾನಾ ರಾಜ್ಯಗಳಿಗೆ ಸದ್ದಿಲ್ಲದೇ ರಫ್ತು ಮಾಡುತ್ತಿದ್ದಾರೆ.ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಗೋಲಬಾವಿಯ ಮಹಾದೇವ ಮಠದದ ಸಾವಯುವ ಬೆಲ್ಲ ತಯಾರಿಸಿ ಬೆಂಗಳೂರು ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ರಫ್ತು ಮಾಡುತ್ತಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳ,ಜಮಖಂಡಿ,ಮಹಾಲಿಂಗಪೂರ,ತೇರದಾಳ,ಹಣಗಂಡಿ,ಬೆಳಗಲಿ ಹಾಗೂ ಬೆಳಗಾವಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಯಾರ ನೆರವಿಲ್ಲದೇ ಬೆಲ್ಲ ತಯಾರಿಕೆ ಆಲೆ ಮನೆಗಳನ್ನು ಹಾಕಿಕೊಂಡು ಜೀವನ ನಿರ್ವಹಿಸುವ ನೂರಾರು ಕುಟುಂಬಗಳಿವೆ.ಆದರೆ,ಅಲ್ಲಿನ ಶೇ.98 ರಷ್ಟು ಘಟಕಗಳಲ್ಲಿ ರಾಸಾಯನಿಕ ಬೆಲ್ಲ ಉತ್ಪಾದಿಸಲಾಗುತ್ತಿದೆ.ಆದರೆ ಇದು ರಾಸಾಯನಿಕ ರಹಿತ ಬೆಲ್ಲ.ಬೆಲ್ಲ ತಯಾರಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ.ಆದರೆ,ಸಾವಯುವ ಬೆಲ್ಲ ತಯಾರಿಕೆ ಘಟಕಗಳು,ಕುಟುಂಬಗಳು ಬೆರಳಣಿಕೆಯಷ್ಟು ಮಾತ್ರ ಇವೆ.ತಿಂಗಳ ಮುಂಚೆ ತಯಾರಿಸಿದ ಬೆಲ್ಲಕ್ಕೆ ಭಾರಿ ಬೇಡಿಕೆ ಇರುತ್ತದೆ.ಬೆಂಡಿ ಬಳ್ಳಿ,ಸುಣ್ಣ,ಗಾಣದ ಎಣ್ಣೆ ಬಳಕೆ ಮಾಡಲಾಗುತ್ತಿದೆ.ಇವರು ಇನ್ನಷ್ಟು ರುಚಿಯಾಗಲು ತುಪ್ಪ ಸಹ ಬಳಕೆ ಮಾಡುತ್ತಿದ್ದಾರೆ.
ತಪ್ಪದೇ ಈ ಮೇಲಿನ ವಿಡಿಯೋ ವಿಕ್ಷಿಸಿ...☝☝☝☝☝👉ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698
ಸದ್ದಿಲ್ಲದ ಮಾರುಕಟ್ಟೆ: ಸಾವಯುವ ಬೆಲ್ಲಕ್ಕೆ ಸರಿಯಾದ,ಸಮರ್ಪಕವಾಗಿರುವ ಪ್ರಚಾರದ ಕೊರತೆಯಿದೆ.ಪ್ರತಿ ತಿಂಗಳು ಹೊರರಾಜ್ಯಕ್ಕೆ 10ಟನ್ ಬೆಲ್ಲ ಕಾಶ್ಮೀರ,ಓಡಿಸ್ಸಾ,ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಸದ್ದಿಲ್ಲದೆ ಪ್ರತಿ ತಿಂಗಳು 2.5ಟನ್ ಬೆಲ್ಲ ರಫ್ತು ಮಾಡುತ್ತಾರೆ.ಬೇರೆ ಬೆಲ್ಲ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40ರೂ.ದರ ಇದ್ದರೆ,ಈ ರಾಸಾಯನಿಕ ರಹಿತ ಬೆಲ್ಲಕ್ಕೆ 55ರೂ ಕೆ.ಜಿ. ಇವರ ಹತ್ತಿರ ಕೊಂಡು ಮಾರುಕಟ್ಟೆಯಲ್ಲಿ ಇದೆ ಬೆಲ್ಲ ಸಿಗುವ ಬೆಲೆ ಬೆಂಗಳೂರಲ್ಲಿ 70ರೂ,ಹಾಗೂ ಕಾಶೀರದಲ್ಲಿ 150ರೂ.ಕೆ.ಜಿ.ಗೆ ಮಾರಾಟವಾಗುತ್ತಿದೆ. ಸಾವಯುವ ಬೆಲ್ಲ ಬಳಕೆ ಮಾಡಿದರೆ ನಾನಾ ತರಹದ ರೋಗಗಳು ಗುಣಮುಖವಾಗಬಹುದು,ತಡೆಗಟ್ಟಬಹುದು ಎಂದು ಹೇಳಲಾಗುತ್ತಿದೆ.
ಕೃಷಿ ವಿಧಾನ: ಭೂಮಿಯನ್ನು ಹದ ಮಾಡಿ ಎಕರೆಗೆ 15ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು.ಮೂರು ಅಡಿ ಸಾಲು ಮಾಡಿ ಎರಡು ಸಾಲು ಮಾಡಿ ಆಯಾ ಹಂಗಾಮಿಗೆ ತಕ್ಕ ಮಿಶ್ರ ಬೆಳೆ ಮಾಡಬಹುದಾಗಿದೆ.ಜೂನ್,ಜುಲೈ ತಿಂಗಳಲ್ಲಿ ಅರಿಷಿನ,ಶೇಂಗಾ ನಾಟಿ ಮಾಡಬಹುದು.ಕಬ್ಬು ನಾಟಿ ಮಾಡಿದ ಮೂರು ತಿಂಗಳ ನಂತರ ಹಸಿರೆಲೆ ಸಸ್ಯಗಳನ್ನು ಅಲ್ಲಿಯೇ ಮುಚ್ಚಬಹುದು.ಕಬ್ಬಿಗೆ ಹೀಗೆ ಮಾಡುವುದರಿಂದ ಸಾರಜನಕ ಪೂರೈಸಿದಂತಾಗುತ್ತದೆ.ಕಬ್ಬು ಬೆಳೆಯಲು 5ಲೀಟರ್ ಆಕಳ ಮೂತ್ರ,3ಕೆ.ಜಿ.ಜವಾರಿ ಆಕಳ ಸಗಣೆ,ಔಡಲ ಎಣ್ಣೆ,ಸುಡು ಬೆಂಡಿರಸ ಸೇರಿಸಿ ಮೂರುದಿನ ಇಟ್ಟು ಬಳಿಕ ಬೂಮಿಗೆ ಸಿಂಪಡಿಸಬೇಕು.ಈ ರೀತಿ ಕಬ್ಬು ಪ್ರತಿ ಎಕರೆಗೆ 50ಟನ್ ಬರುತ್ತದೆ.ಇದರಿಂದ ನೆಮ್ಮದಿ ಜೀವನ ನಡೆಸಬಹುದು ಎಂದು ಅವರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ರೈತ ಬೆಲ್ಲ ತಯಾರಕ ಮಹಾದೇವ ಮಠದ ಮೋಬೈಲ್: +91 9632484530 ಗೆ.ಸಂಪರ್ಕಿಸಬಹುದು.
--------
ಬೆಲ್ಲ ಹಾಗೂ ಸಕ್ಕರೆ ಎರಡೂ ಕಬ್ಬಿನ ಹಾಲಿನಿಂದಲೇ ತಯಾರಿಸುವುದಾದರೂ ಸಿಹಿ ಪದಾರ್ಥಕ್ಕೆ ನಿಮ್ಮ ಆಯ್ಕೆ ಬೆಲ್ಲ ಆಗಿದ್ದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ ಬನ್ನಿ.ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯಗಳು ಉಳಿದಿರುತ್ತದೆ.ಬೆಲ್ಲ ಖನಿಜ ಲವಣ,ಕಬ್ಬಿಣ ಮತ್ತು ನಾರನ್ನು ಹೊಂದಿರುತ್ತದೆ.ಕಾಪಿ-ಟೀü ಹಾಗೂ ಸಿಹಿ ಪದಾರ್ಥಗಳಿಗೆ ಸಕ್ಕರೆ ಬದಲು ಬೆಲ್ಲ ಬಳಸಿದರೆ ಈ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡೆಯಬಹುದು:
1. ರಕ್ತಹೀನತೆ ಬರದಂತೆ ತಡೆಯುವುದು ಬೆಲ್ಲದಲ್ಲಿ ಮೆಗ್ನಿಷಿಯಂ,ಪೊಟ್ಯಾಷಿಯಂ,ಕ್ಯಾಲ್ಸಿಯಂ,ಮ್ಯಾಂಗನೀಸ್,ಸೆಲೆನಿಯಂ,ಸತ್ವ ಇರುವುದರಿಂದ ರಕ್ತಹೀನತೆ ಬರದಂತೆ ತಡೆಯುತ್ತದೆ.ತಾಳೆ ಬೆಲ್ಲ ಕಬ್ಬಿಣಾಂಶದಿಂದ ಸಮೃದ್ಧವಾಗಿದ್ದು ಇದು ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆಯನ್ನು ಗುಣಪಡಿಸುತ್ತದೆ.
2. ಬೆಲ್ಲ ತಿಂದರೆ ದೇಹದಲ್ಲಿ ಸಕ್ಕರೆಯಂಶ ಕೂಡಲೇ ಅಧಿಕವಾಗುವುದಿಲ್ಲ ಸಕ್ಕರೆ ಹಾಕಿದ ಸಿಹಿಪದಾರ್ಥ ಸೇವಿಸಿದರೆ ದೇಹದಲ್ಲಿರುವ ಸಕ್ಕರೆಯಂಶ ಕೂಡಲೇ ಅಧಿಕವಾಗುವುದು,ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
3. ಸಕ್ಕರೆಯಷ್ಟು ಕ್ಯಾಲೊರಿ ಬೆಲ್ಲದಲ್ಲಿ ಇರುವುದಿಲ್ಲ.ಸಕ್ಕರೆಯನ್ನು 'ಖಾಲಿ ಕ್ಯಾಲೊರಿ'ಎಂದೂ ಕರೆಯಲಗುತ್ತದೆ,ಎಂದರೆ,ಇದು ಶೂನ್ಯ ಪೌಷ್ಟಿಕಾಂಶ ಮೌಲ್ಯವಿರುವ ಕ್ಯಾಲೊರಿ ಹೊಂದಿದೆ. ಬೆಲ್ಲ ಪೌಷ್ಟಿಕಾಂಶದ ಮೌಲ್ಯಗಳಿಂದ ಸಮೃದ್ಧವಾಗಿರುವುದರಿಂದ ಇದನ್ನು ಅನೇಕ ಪ್ರಯೋಜನಗಳ ಆಗರವೆಂದು ಕರೆಯಲಾಗುತ್ತದೆ.
4. ಬೆಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಬೆಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ರೋಗಗಳು ಮತ್ತು ಸೋಂಕಗಳನ್ನು ದೂರವಿಡುತ್ತದೆ.
5. ಬೆಲ್ಲ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.ಆಹಾರ ಸೇವನೆಯ ನಂತರ ಬೆಲ್ಲ ಸೇವಿಸುವುದರಿಂದ ಜೀರ್ಣಕ್ರಿಯೆಗೆ ನೆರವಾಗುತ್ತದೆ.ಜೊತೆಗೆ,ಇದು ಶರೀರದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಹಾಗೂ ಉಸಿರಾಟದ ಸ್ನಾಯುಗಳನ್ನು ಶಾಂತಗೊಳಿಸಲು ನೆರವಾಗುತ್ತದೆ.
6. ಬೆಲ್ಲ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಮೈ ತೂಕ ಕೂಡ ಅಧಿಕವಾಗುವುದಿಲ್ಲ.ಜೀರ್ಣಕ್ಕೆ ಸಂಬಂಧಿಸಿದ ಅಸಹಜತೆಗಳಿಂದ ಉಪಶಮನ ನೀಡುವ ಸಾಮಥ್ರ್ಯ ಹೊಂದಿದೆ.ಇದು ಕೇವಲ ಜೀರ್ಣಕಾರಕ ಕಿಣ್ವಗಳನ್ನು ಸಕ್ರಿಯಗೊಳಿಸುವುದಷ್ಟೇ ಅಲ್ಲದೇ,ಮಲ ವಿಸರ್ಜನೆಯನ್ನು ನಿಯಮಿತಗೊಳಿಸಿ ಮಲಬದ್ಧತೆ ಮತ್ತು ಅಜೀರ್ಣತೆಯನ್ನು ನಿವಾರಿಸುತ್ತದೆ.ಪೊಟ್ಯಾಷಿಯಂ ನಿಂದ ಸಮೃದ್ಧವಾಗಿರುವ ಇದ,ಎಲೆಕ್ಟ್ರೋಲೈಟ್ ಸಮತೋಲನವನ್ನು ನಿರ್ವಹಿಸಿ ನೀರು ಸಂಚಯವಾಗುವುದನ್ನು ತಡೆಯಲು ನೆರವಾಗುತ್ತದೆ.ಇವೆಲ್ಲವೂ ತೂಕ ಕಡಿಮೆಯಾಗುವಲ್ಲಿ ಪ್ರಮುಖ ಪಾತರ ನಿರ್ವಹಿಸುತ್ತವೆ.
👉ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698





Social Plugin