ತೇರದಾಳದ ದೇವರಾಜ ನಗರದಲ್ಲಿ ಗೋಶಾಲೆಗೆ ಸಮೀಪದ ಶೇಗುಣಸಿ ಗ್ರಾಮದ ಶ್ರೀರಾಮ ಸೇನೆಯ ಸದಸ್ಯರು ಹಾಗೂ ಗ್ರಾಮದ ಹಿರಿಯರು ಇಂದು ಮೇವುನ್ನು ಕೊಟ್ಟರು.
ತೇರದಾಳದ ಗೋಶಾಲೆಗೆ ಶೇಗುಣಸಿ ಗ್ರಾಮಸ್ಥರಿಂದ ಮೇವು ಕೊಡುಗೆ
ತೇರದಾಳ : ಪಟ್ಟಣದ ದೇವರಾಜ ನಗರದಲ್ಲಿನ ಗೋಶಾಲೆಗೆ ಸಮೀಪದ ಶೇಗುಣಸಿ ಗ್ರಾಮದ ಶ್ರೀರಾಮ ಸೇನೆಯ ಸದಸ್ಯರು ಹಾಗೂ ಗ್ರಾಮದ ಹಿರಿಯರಿಂದ ಇಂದು ಒಣ ಮೇವನ್ನು ಕೊಡುಗೆಯಾಗಿ ಕೊಟ್ಟರು.
  ಕಳೆದ ಒಂದು ವಾರದಿಂದ ಹಸಿ ಮೇವು ಹಾಗೂ ಕಬ್ಬಿನ ವಾಡಿಯನ್ನು ಮತ್ತು ಒಣ ಕಣಕಿಯನ್ನು ತಮ್ಮ ಟ್ರಾಕ್ಟರ್‍ಗಳ ಮುಖಾಂತರ ದೇವರಾಜ ನಗರದಲ್ಲಿನ ಗೋಶಾಲೆಗೆ ಮೇವನ್ನು ತಂದು ಕೊಡುತ್ತಿದ್ದಾರೆ. ದಿನಾಲು ತಮ್ಮ ಟ್ರಾಕ್ಟರ್ ಮೂಲಕ ಮೇವನ್ನು ತಂದು ಗೋಶಾಲೆಗೆ ಕೊಟ್ಟಿದ್ದಾರೆ. ಟ್ರಾಕ್ಟರ್‍ಗೆ ಡೀಸೆಲ್ ಸಹ ಅವರೇ ಹಾಕಿ ಗೋಶಾಲೆ ಮೇವನ್ನು ಕೊಡುವ ಮೂಲಕ ಶೇಗುಣಸಿ ಗ್ರಾಮದ ಗ್ರಾಮಸ್ಥರು ಮೆಚ್ಚುಗೆಯನ್ನು ಪಡೆದಿದ್ದಾರೆ. 
  ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಗುರುರಾಜ ಪಾಟೀಲ ಅಶೋಕ ಅಮ್ಮಣಗಿ, ಮಹೇಶ ಪತ್ತಾರ, ಸಾಗರ ಅಂಬಿ, ಕಲ್ಮೇಶ ಗುರುಸ್ವಾಮಿ, ಸಂಗಮೇಶ ಅಂಬಿ, ಮಾಧವಾನಂದ ಶಾನವಾಡ, ಬಸವರಾಜ ಅಥಣಿ, ಜಡಸಿದ್ದಯ್ಯ ಹಿರೇಮಠ, ಚೇತನ ಹಳಿಂಗಳಿ, ಕಿರಣ ಹೊರಟ್ಟಿ, ಗುರಯ್ಯ ಪುರಾಣಿಕಮಠ, ಬಸವಕಿರಣ ಖೋತ, ಬಾಹುರಾಜ ಗುಗ್ಗರಿ, ಶ್ರೀಶೈಲ ಬೆಳ್ಳಿ ಸೇರಿದಂತೆ ಇನ್ನಿತರರು ಇದ್ದರು.
  ಈ ಸಂದರ್ಭದಲ್ಲಿ ಮಾತನಾಡಿದ ಸದಾಶಿವ ಗೋಡಸೆ ಶೇಗುಣಸಿ ಗ್ರಾಮದ ಶ್ರೀರಾಮಸೇನೆಯ ಯುವಕರು ಮತ್ತು ಗ್ರಾಮಸ್ಥರ ಸಹಕಾರ ಹೀಗೆಯೇ ಮುಂದುವರೆಯಲಿ. ಇನ್ನೂ ಯಾರಾದರೂ ಈ ತರಹದ ಸೇವೆ ಮಾಡುವವರಿದ್ದರೆ ಗೋಶಾಲೆಗೆ ಬಂದು ನಮ್ಮನ್ನು ಸಂಪರ್ಕಿಸಿ ಅವರು ಸಹಾಯ ಮಾಡಲಿ ಕಳೆದ ನಾಲ್ಕು ದಿನಗಳಿಂದ ಸಹಾಯ ಮಾಡುತ್ತಿರುವವರಿಗೆ ನಮ್ಮೆಲ್ಲರ ಪರವಾಗಿ ಧನ್ಯವಾದಗಳು ಎಂದರು.