ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಎಸ್. ಸತ್ಯವತಿ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡ ಸೋಮವಾರ ರಾತ್ರಿವರೆಗೂ ತೇರದಾಳ ಶಾಸಕ ಸಿದ್ದು ಸವದಿ ಹಾಗು ಅಂದಿನ ರಬಕವಿ-ಬನಹಟ್ಟಿ ತಹಶೀಲ್ದಾರರಾಗಿದ್ದ ಪ್ರಶಾಂತ ಚನಗೊಂಡ ಅವರನ್ನು ಪ್ರತ್ಯೇಕವಾಗಿ ತೀವ್ರ ವಿಚಾರಣೆ ನಡೆಸಿತು.
ಮೂರು ದಿನಗಳಿಂದ ವಿಚಾರಣೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು ಸೋಮವಾರ ಬನಹಟ್ಟಿಯ ಅತಿಥಿ ಗೃಹದಲ್ಲಿ ವಿಚಾರಣೆ ಕೈಗೊಂಡರು.ಇದಕ್ಕೂ ಮೊದಲು ರವಿವಾರ ಮಹಾಲಿಂಗಪೂರ ಪುರಸಭಾಧ್ಯಕ್ಷೆ ಸ್ನೇಹಲ್ ಅಂಗಡಿ ಸೇರಿದಂತೆ ಕಾಂಗ್ರೆಸ್ ಸದಸ್ಯರನ್ನು ಘಟನೆ ಕುರಿತು ವಿಚಾರಿಸಿದರು. ಸಂಜೆ ಹೊತ್ತು ಸುಮಾರು ೨ ಗಂಟೆಗಳ ಕಾಲ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರನ್ನು ವಿಚಾರಣೆ ನಡೆಸುವ ಮೂಲಕ ಪ್ರತ್ಯೇಕ ಹೇಳಿಕೆ ಪಡೆದಿದ್ದು, ನಂತರ ರಾತ್ರಿ ೮ ಗಂಟೆಯಿಂದ ತೇರದಾಳ ಶಾಸಕ ಸಿದ್ದು ಸವದಿಯವರಿಂದಲೂ ಪ್ರತ್ಯೇಕ ಹೇಳಿಕೆ ಪಡೆಯಲಾಗಿದೆ ಎನ್ನಲಾಗಿದೆ. ಒಟ್ಟು ನಾಲ್ಕು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ೯೩ ಜನರ ವಿಚಾರಣೆ ನಡೆಸುತ್ತಿದ್ದಾರೆ.
ಅಂದು ಚುನಾವಣೆ ವೇಳೆ ನಡೆದ ಗಲಾಟೆ ನಂತರ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಸದಸ್ಯೆ ಚಾಂದನಿ ನಾಯಕ್ ಅವರ ಜುಟ್ಟು ಹಿಡಿದು ಎಳೆದಿರುವ ಶಾಸಕ ಸಿದ್ದು ಸವದಿ ಅವರ ಮೇಲಿನ ಆರೋಪದ ಕುರಿತು ವಿಚಾರಣೆ ಕೈಗೆತ್ತಿಕೊಂಡ ಅಧಿಕಾರಿಗಳಿಗೆ ಯಾವ ಮಾಹಿತಿ ದೊರಕಿದೆ ಎಂಬುದನ್ನು ಗೌಪ್ಯವಾಗಿದೆ.
ಸಿಐಡಿ ವಿಚಾರಣೆ ನಂತರ ಮಾತನಾಡಿದ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಚುನಾವಣೆ ಪ್ರಕ್ರಿಯೆಯಲ್ಲಿ ನಾನು ತೊಡಗಿದ್ದೆ, ಗಲಾಟೆ ಕುರಿತಾದ ಮಾಹಿತಿ ಸ್ಪಷ್ಟವಿಲ್ಲದರ ಬಗ್ಗೆ ಮಾಹಿತಿ ಒದಗಿಸಿದ್ದೇನೆ ಎಂದರು.
ಸಿಐಡಿ ಅಧಿಕಾರಿಗಳು ಬನಹಟ್ಟಿ ವಿಶ್ರಾಂತಿ ಗೃಹಕ್ಕೆ ಬಂದಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಅಧಿಕಾರಿಗಳ ಭೆಟ್ಟಿಗೆ ನಾನಾಗಿಯೇ ಬಂದಿದ್ದೇನೆ.’ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ತಿಳಿಸಿದ್ರು.
`ಪ್ರಕರಣದ ಕುರಿತು ಪ್ರಾಥಮಿಕ ಹಂತದಲ್ಲಿದ್ದು ಒಟ್ಟು ಐದಾರು ಪ್ರಕರಣಗಳ ಬಗ್ಗೆ ತನಿಖೆ ನಡೆಯಲಾಗುತ್ತಿದ್ದು, ಯಾವದೇ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲವೆಂದು ಸಿಐಡಿ ಇಲಾಖೆ ಡಿಐಎಸ್ಪಿ ಎಸ್. ಸತ್ಯವತಿ ತಿಳಿಸಿದ್ರು.
ವರದಿ
ಚಂದ್ರಶೇಖರ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ.

Social Plugin