ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಜಗಳ ಬಿಡಿಸಲು ಹೋದ ಡಾಬಾ ಮಾಲೀಕ ಪ್ರಕಾಶ್ ನಾಗನೂರ(38) ಎಂಬುವವರನ್ನು ಹತ್ಯೆ ಮಾಡಲಾಗಿದೆ. ಪ್ರಕಾಶ್ ನಾಗನೂರ ಸ್ನೇಹಿತ ಮಂಜುನಾಥ್ ಮತ್ತು ಅಜೀಜ್ ಎಂಬಿಬ್ಬರ ಮಧ್ಯೆ 1,500 ರೂಪಾಯಿಗೆ ನಿನ್ನೆ ಸಂಜೆ ಪ್ರಕಾಶ್ ಡಾಬಾದಲ್ಲಿ ಜಗಳ ನಡೆದಿತ್ತು.
ತನ್ನ ಡಾಬಾದಲ್ಲಿ ಗೆಳೆಯರಿಬ್ಬರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಪ್ರಕಾಶ್ ಮುಂದಾಗಿದ್ದಾರೆ. ಆವೇಳೆ ಡಾಬಾ ಮಾಲೀಕ ಪ್ರಕಾಶ್ ಅವರ ಮೇಲೆಯೇ ಹಲ್ಲೆ ನಡೆದಿದೆ. ಅಜೀಜ್, 7 ಹುಡುಗರನ್ನು ಸೇರಿಸಿಕೊಂಡು ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಆರೋಪಿಗಳೆಲ್ಲ ಪ್ರಕಾಶ್ ನಾಗನೂರ ಅವರನ್ನು ಹಿಗ್ಗಾಮುಗ್ಗಾ ಹೊಡೆದು ಪರಾರಿಯಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಪ್ರಕಾಶ್ ನಾಗನೂರ ಅವರು ಆಸ್ಪತ್ರೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಸಾವಿಗೀಡಾಗಿದ್ದಾರೆ.

Social Plugin