ವರದಿ : ವಿಜಯ ವಾಜಂತ್ರಿ.
ನೂತನ ಪಿಎಸ್‍ಐಗೆ ಬಿಜೆಪಿ ಪುರಸಭೆ ಸದಸ್ಯರು ಸನ್ಮಾನಿಸಿ ಸ್ವಾಗತಿಸಿದರು.
ತೇರದಾಳ : ತೇರದಾಳ ಪಟ್ಟಣದ ಪೋಲಿಸ್ ಠಾಣೆಗೆ ನೂತನ ಪಿಎಸ್‍ಐ ಆಗಿ ವರ್ಗಾವಣೆಗೊಂಡು ಆಗಮಸಿದ ರಾಜು ಬೀಳಗಿ ಅಧಿಕಾರವಹಿಸಿ ಕೊಂಡಿದ್ದಕ್ಕಾಗಿ ತೇರದಾಳ ಪಟ್ಟಣದ ಪುರಸಭೆ ಸದಸ್ಯರು ಸನ್ಮಾನಿಸಿ ಸ್ವಾಗತಿಸಿ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‍ಐ ರಾಜು ಬೀಳಗಿ ಈ ಹಿಂದೆ ಪಿಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ ಕಾಂಬಳೆ ಅವರಿಂದ ಅಧಿಕಾರವನ್ನು ಪಡೆದುಕೊಂಡಿದ್ದೇನೆ. ಪಟ್ಟಣದ ಮುಖಂಡರು ಹಿರಿಯರು ಅಭಿಮಾನದಿಂದ ನನ್ನನ್ನು ಸ್ವಾಗತಿಸಿದ್ದೀರಿ ಇದು ತೇರದಾಳ ಪಟ್ಟಣದ ಹೆಮ್ಮೆ ಎನಿಸುತ್ತದೆ. ಈ ಮೊದಲು ಠಾಣಾಧಿಕಾರಿಗಳಿಗೆ ಯಾವ ರೀತಿ ಸಹಕಾರ ಕೊಡುತ್ತೀದಿರಿ ಹಾಗೂ ಪೋಲಿಸರೊಂದಿಗೆ ಯಾವ ರೀತಿ ಒಡನಾಟ ಇತ್ತು ಅದನ್ನು ಇದೇ ರೀತಿ ಮುಂದೆವರೆಸಿಕೊಂಡು ಹೋಗೋಣ ಎಂದು ತಮ್ಮಲ್ಲಿ ಮನವಿ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿದ್ದು ಅಮ್ಮಣಗಿ, ಸಚಿನ್ ಕೊಡತೆ, ಕಾಶಿನಾಥ ರಾಥೋಡ, ಸದಾಶಿವ ಹೊಸಮನಿ, ಲಕ್ಷಣ ನಾಯಕ್, ಶಂಕರ್ ಕುಂಬಾರ, ಕುಮಾರ ಸರಿಕರ,ಕೇದಾರಿ ಪಾಟೀಲ್, ವಿಠ್ಠಲ ತಟ್ರಿ, ಸಂಗಮೇಶ ಕಾಲತಿಪ್ಪಿ, ಅನಿಲ್ ವಡ್ಡರ, ಹಾಫಿಜಾ ಮೌಲಾನಾ ಚಿತ್ರಭಾನಕೋಟೆ,ಪ್ರಕಾಶ ಶೇಡಬಾಳ, ಪ್ರಕಾಶ ಹೊಸಮನಿ ಸೇರದಂತೆ ಇನ್ನಿತರರು ಇದ್ದರು.

Social Plugin