ನೇಕಾರರ ನಾಯಕ ಸಿದ್ದು ಸವದಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು:: ಬಿಜೆಪಿ ಮುಖಂಡ ಬಸವರಾಜ ತೆಗ್ಗಿ ಆಗ್ರಹ
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನೇಕಾರರ ಇರುವ ಕ್ಷೇತ್ರವಿದು ಮತ್ತು ನೇಕಾರರ ಪರವಾಗಿ ವಿಧಾನಸಭೆಯಲ್ಲಿ ಯಾರಾದರೂ ಧ್ವನಿ ಎತ್ತಿದರೆ ಅದು ಶಾಸಕ ಸಿದ್ದು ಸವದಿ ಮಾತ್ರ ಮತ್ತು ಈಗಾಗಲೇ ಮೂರು ಬಾರಿ ಶಾಸಕರು. ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಹಾಗೂ ಕೆ.ಎಚ್.ಡಿ.ಸಿ. ನಿಗಮದ ಅಧ್ಯಕ್ಷ ಸಿದ್ದು ಸವದಿಯವರಿಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿ ಮುಖಂಡ ಬಸವರಾಜ ತೆಗ್ಗಿ ಒತ್ತಾಯಿಸಿದ್ದಾರೆ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ
ನಿರೀಕ್ಷಣಾ ಮಂದಿರದಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ. ತೇರದಾಳ ಮತಕ್ಷೇತ್ರದ ಭಾಗದಲ್ಲಿರುವ ನೇಕಾರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ನಾಡಿ ಮಿಡಿತ ಬಲ್ಲವರಾಗಿದ್ದಾರೆ. ಸಚಿವರಾಗಲು ಎಲ್ಲ ಅರ್ಹತೆಗಳನ್ನು ಹೊಂದಿರುವ ಸವದಿಯವರು ಈ ಬಾರಿ ಸಚಿವರಾಗಬೇಕಾಗಿದ್ದು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ರಬಕವಿ ಬನಹಟ್ಟಿ ನಗರ ಮಂಡಲದ ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ಆಗ್ರಹಿಸಿದರು.
ಸರಕಾರದ ಮುಖ್ಯ ಸಚೇತ, ಜವಳಿ ಮೂಲ ಅಭಿವೃದ್ಧಿ ನಿಗಮ ಹಾಗೂ ಕೆಎಚ್‌ಡಿಸಿ. ನಿಗಮದ ಅಧ್ಯಕ್ಷರಾಗಿ ಅಪಾರವಾದ ಅನುಭವ ಹೊಂದಿರುವ ಸಿದ್ದು ಸವದಿಯವರು ಈ ಬಾರಿ ಸಚಿವರಾಗಲೇಬೇಕು. ಬಿಜೆಪಿ ಅಧಿಕಾರಾವಧಿಯಲ್ಲಿ ಸಚಿವರಾಗುವ ಅವಕಾಶದಿಂದ ವಂಚಿತರಾಗಿರುವ ಸವದಿಯವರಿಗೆ ಈ ಸಾರಿ ಬೊಮ್ಮಾಯಿಯವರು ಸಚಿವ ಸ್ಥಾನ ನೀಡುತ್ತಾರೆಂಬ ವಿಶ್ವಾಸವಿದ್ದು, ಬಿಜೆಪಿಯ ನಿಷ್ಠಾವಂತ ಹಿರಿಯ ಶಾಸಕರಾಗಿರುವ ಸವದಿಯವರಿಗೆ ಸಚಿವ ಸ್ಥಾನ ಒಲಿಯಲೇಬೇಕು ಎಂದು ನಗರಸಭಾ ಅಧ್ಯಕ್ಷ ಶ್ರೀಶೈಲ ಬೀಳಗಿ ಹೇಳಿದರು.
ಕರ್ನಾಟಕ ವಿಧಾನಸಭೆಯಲ್ಲಿ ನೇಕಾರರ ಪರ ಧ್ವನಿ ಎತ್ತಿದ ಪ್ರಥಮ ಶಾಸಕರಾಗಿರುವ ಸವದಿಯವರಿಗೆ ನೇಕಾರರ ದುಃಖ-ದುಮ್ಮಾನಗಳ ಅಪಾರವಾದ ಅರಿವಿದೆ. ನೇಕಾರ ಸಮಸ್ಯೆಗಳನ್ನು ಪರಿಹರಿಸಬಲ್ಲ ಸೂಕ್ತ ವ್ಯಕ್ತಿಯಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಿದರೇ ಈ ಭಾಗದಲ್ಲಿ ಹಲವು ವರ್ಷಗಳ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ಸಿಗುತ್ತದೆ ಎಂದು ಹೇಳಿದರು.
ಶಾಸಕ ಸಿದ್ದು ಸವದಿಯವರಿಗೆ ಸಚಿವ ಸ್ಥಾನ ನೀಡದಿದ್ದರೇ ಉಗ್ರವಾದ ಹೋರಾಟ ಮಾಡುವುದಲ್ಲದೇ ತೇರದಾಳ ಕ್ಷೇತ್ರದ ಸಮಸ್ತ ಕಾರ್ಯಕರ್ತರು ಬೆಂಗಳೂರಿಗೆ ಹೋಗಿ ಪಾದಯಾತ್ರೆಯ ಮೂಲಕ ಬಿಜೆಪಿ ವರಿಷ್ಠರಿಗೆ ಮನವಿ ಮನವಿ ಸಲ್ಲಿಸಬೇಕಾಗುತ್ತದೆ ಎಂದು ನಗರಸಭಾ ಸದಸ್ಯ ಸಂಜಯ್ ಜಗ್ಗಿ ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಹದೇವ ಕೋಟ್ಯಾಳ. ಪ್ರಭು ಪೂಜಾರಿ. ಹೀರಾಚಂದ ಕಾಸರ, ಸುಭಾಸ ಚೋಳಿ, ಸುನೀಲ ವಜ್ರಮಟ್ಟಿ, ನಗರಸಭಾ ಸದಸ್ಯರಾದ ಶಿವಾನಂದ ಬುದ್ನಿ, ಚಿದಾನಂದ ಹೊರಟ್ಟಿ, ಅರುಣ ಬುದ್ನಿ, ಪಾಂಡು ಹಿಪ್ಪರಗಿ, ಮಹಾದೇವ ಧೂಪದಾಳ, ಮಾರುತಿ ಗಾಡಿವಡ್ಡರ, ಚಿದಾನಂದ. ಜಯಪ್ರಕಾಶ ಸೊಲ್ಲಾಪುರ. ಯಲ್ಲಪ್ಪ ಕಟಗಿ. ಪಿ ಜಿ ಕಾಕಂಡಕಿ. ಮಾಹಾನಿಂಗ ಗೊಳಸಂಗಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ : ಪ್ರಕಾಶ ಕುಂಬಾರ

Social Plugin