ಅಮೆರಿಕದ CIA ಪರ ಕೆಲಸ ಮಾಡಿ ಓರ್ವ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ ಗೆ ಜೈಲಾಗುವಂತೆ ಮಾಡಿದ ಕಾಂಗ್ರೆಸ್ ನಾಯಕ ಕೇರಳದ ಎ.ಕೆ. ಆಂಟನಿ ಇವರ ಮಾತಿನಂತೆ ನಡೆದುಕೊಂಡ ರಾಜೀವ್ ಗಾಂಧಿ ಕ್ಷಮಿಸಲಾರದ ತಪ್ಪು ಮಾಡಿದ್ದಾರೆ. ಇಲ್ಲವಾಗಿದ್ದರೆ ನಮ್ಮ ದೇಶ ಎಂದೋ ಚಂದ್ರಯಾನ ಮಾಡಿ ಅಧಿಪತ್ಯ ಸಾಧಿಸುತ್ತಿತ್ತು.
 ವಿಜ್ಞಾನಿಗಳಿಗೆ ಅಂದಿನ ಕಾಲದಲ್ಲಿ ಪ್ರೋತ್ಸಾಹ ಸಿಗಲೇ ಇಲ್ಲ ಎನ್ನುವುದಕ್ಕೆ ಇಂತಹ ಅನೇಕ ನಿದರ್ಶನಗಳು ಇವೆ. ಸುಳ್ಳು ಆರೋಪದಡಿ ಜೈಲಿಗೆ ಹಾಕಿ ಚಿತ್ರಹಿಂಸೆ ನೀಡಿದ್ದಕ್ಕಾಗಿ 1 ಕೋಟಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಹಾಗೂ ಮಾನವ ಹಕ್ಕುಗಳ ಆಯೋಗ ಕೇರಳ ಸರ್ಕಾರಕ್ಕೆ ಆದೇಶ ಮಾಡಿತ್ತು.
ಅಂದಹಾಗೆ ಕ್ರಯೊಜನಿಕ್ ರಾಕೆಟ್ ಎಂಜಿನ್ ಕಂಡುಹಿಡಿದ ನಂಬಿ ನಾರಾಯಣನ್ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ 2019ರಲ್ಲಿ ಪಧ್ಮಭೂಷಣ ನೀಡಿ ಗೌರವಿಸಿದೆ.

- ವರದಿ : ಮಲ್ಲಿಕಾರ್ಜುನ ಘೋಸರವಾಡ