ವರದಿ : ವಿಜಯ ವಾಜಂತ್ರಿ.

ತೇರದಾಳ ಪಟ್ಟಣದ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡ ನೂತನ ಪಿಎಸ್‍ಐ ರಾಜು ಬೀಳಗಿ ಇವರನ್ನು ಬಿಜೆಪಿ ಹಿರಿಯರು ಸನ್ಮಾನಿಸಿ ಸ್ವಾಗತಿಸಿದರು.
ನೂತನ ಪಿಎಸ್‍ಐಗೆ ಹಿರಿಯರಿಂದ ಸನ್ಮಾನದೊಂದಿಗೆ ಸ್ವಾಗತ
ತೇರದಾಳ : ತೇರದಾಳ ಪಟ್ಟಣದ ಪೋಲಿಸ್ ಠಾಣೆಗೆ ನೂತನ ಪಿಎಸ್‍ಐ ಆಗಿ ವರ್ಗಾವಣೆಗೊಂಡು ಆಗಮಸಿದ ರಾಜು ಬೀಳಗಿ ಅಧಿಕಾರವಹಿಸಿ ಕೊಂಡಿದ್ದಕ್ಕಾಗಿ ತೇರದಾಳ ಪಟ್ಟಣದ ಬಿಜೆಪಿ ಮುಖಂಡರು ಹಾಗೂ ಪಟ್ಟಣದ ಹಿರಿಯರು ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿದರು. 
 ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‍ಐ ರಾಜು ಬೀಳಗಿ ಈ ಹಿಂದೆ ಪಿಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ ಕಾಂಬಳೆ ಅವರಿಂದ ಅಧಿಕಾರವನ್ನು ಪಡೆದುಕೊಂಡಿದ್ದೇನೆ. ಪಟ್ಟಣದ ಮುಖಂಡರು ಹಿರಿಯರು ಅಭಿಮಾನದಿಂದ ನನ್ನನ್ನು ಸ್ವಾಗತಿಸಿದ್ದೀರಿ ಇದು ತೇರದಾಳ ಪಟ್ಟಣದ ಹೆಮ್ಮೆ ಎನಿಸುತ್ತದೆ. ಈ ಮೊದಲು ಠಾಣಾಧಿಕಾರಿಗಳಿಗೆ ಯಾವ ರೀತಿ ಸಹಕಾರ ಕೊಡುತ್ತೀದಿರಿ ಹಾಗೂ ಪೋಲಿಸರೊಂದಿಗೆ ಯಾವ ರೀತಿ ಒಡನಾಟ ಇತ್ತು ಅದನ್ನು ಇದೇ ರೀತಿ ಮುಂದೆವರೆಸಿಕೊಂಡು ಹೋಗೋಣ ಎಂದು ತಮ್ಮಲ್ಲಿ ಮನವಿ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದರು. 
  ಈ ಸಂದರ್ಭದಲ್ಲಿ ಬಸಪ್ಪ ಮುಕರಿ, ಸುರೇಶ ರೇಣಕೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಸಿದ್ದು ಅಮ್ಮಣಗಿ, ಭೀಮಶಿ ಹಿರೇಕುರುಬರ, ಶೀತಲ ಬೋಳಗೊಂಡ,ಸಂತೋಷ ಜಮಖಂಡಿ, ಶೀತಲ ಘೂಳನ್ನವರ, ಅಪ್ಪು ಮಂಗಸೂಳಿ,ಸಚಿನ್ ಕೊಡತೆ,ಸದಾಶಿವ ಹೊಸಮನಿ, ಕಾಶಿನಾಥ ರಾಥೋಡ, ವಿಜಯಪ್ರಕಾಶ ದಾನಿಗೊಂಡ, ಉಮೇಶ ದೊಡಮನಿ, ಪ್ರಮೋದ ಕೋರಿಗೇರಿ,ಶಂಕರ ಕುಂಬಾರ,ವಿಠ್ಠಲ್ ತಟ್ರಿ,ಸಂಗಮೇಶ ಕಾಲತಿಪ್ಪಿ, ವರ್ಧಮಾನ್ ಕಡಹಟ್ಟಿ, ಅಲ್ಲಪ್ಪ ಮದಲಮಟ್ಟಿ, ಅಲ್ಲಪ್ಪ ಬಾಬಗೊಂಡ,ಮುನ್ನಾ ತಹಶೀಲ್ದಾರ, ತಿಮ್ಮಣ್ಣ  ಗಾಡಿವಡ್ಡರ, ಪಾರೀಶ ಆಲಗೂರ, ಭರತೇಶ ಸವದಿ ಸೇರದಂತೆ ಇನ್ನಿತರರು ಇದ್ದರು.