ದೂರುದಾರರು ಅಧಿಕಾರಿಗಳನ್ನು ದಿಕ್ಕು ತಪ್ಪಿಸಿಲ್ಲ -ಮುಖ್ಯಾಧಿಕಾರಿ
ತೇರದಾಳ : ಪಟ್ಟಣದ ಗುರುಕುಲ ರಸ್ತೆಯ ಪಕ್ಕದಲ್ಲಿರುವ ರಮೇಶ ಪೋತದಾರ ಶಿಕ್ಷಕ ಪುರಸಭೆ ಜಾಗೆಯನ್ನು ಅತೀಕ್ರಮಣ ಮಾಡಿ ಚರಂಡಿಯಲ್ಲಿ ತಾವು ನಿರ್ಮಾಣ ಮಾಡಿದ ಬಿಲ್ಡಿಂಗ್ ಕಾಲಂನ್ನು ನಿಲ್ಲಿಸಿದ್ದಾರೆ ಎಂದು ಟೀಚರ್ಸ್ ಕಾಲನಿಯ ಮಹೇಶ ಕುಂಚಗನೂರ ಪುರಸಭೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅದರನ್ವಯ ರವಿವಾರ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಹಾಗೂ ಅವರ ಸಿಬ್ಬಂದಿಯವರು ಆ ಸ್ಥಳಕ್ಕೆ ಹೋಗಿ ಸ್ಥಳ ಪರೀಶೀಲನೇ ಮಾಡಿದೇವು. ಚರಂಡಿ ಮುಚ್ಚಿರುವುದರಿಂದ ನಮಗೆ ಕಾಲಂ ಎಲ್ಲಿದೆ ಎಂಬುದು ಗೋತ್ತಾಗಲಿಲ್ಲ. ನಂತರ ಅದನ್ನು ತೆರವುಗೊಳಿಸಿದಾಗ ಕಾಲಂ ಚರಂಡಿಯ ಪಕ್ಕದಲ್ಲಿರುವುದು ಕಂಡು ಬಂದಿತು. ಮೇಲ್ನೋಟಕ್ಕೆ ಕಾಲಂ ಚರಂಡಿಯಲ್ಲಿರುವುದು ಕಂಡು ಬಂದಿಲ್ಲ.
ಮತ್ತೇ ದೂರುದಾರರು ಪುರಸಭೆಗೆ ಹೋಗಿ ಮುಖ್ಯಾಧಿಕಾರಿಗಳನ್ನು ಆಚರಂಡಿಯನ್ನು ಅಳತೆ ಮಾಡಿ ಪರಿಶೀಲನೆ ಮಾಡಬೇಕು ಎಂದು ಒತ್ತಾಯ ಪಡಿಸಿದರು. ನಾವು ಮತ್ತೋಮ್ಮೆ ಪುನರ್ ಪರಿಶೀಲನೆ ಮಾಡುತ್ತೇವೆ. ಪಟ್ಟಣದಲ್ಲಿ ಯಾರಾದರೂ ಪುರಸಭೆ ವ್ಯಾಪ್ತಿಯಲ್ಲಿನ ಜಾಗೆಯನ್ನು ಅತೀಕ್ರಮಣ ಮಾಡಿದರೆ ಅಂತಹ ಜಾಗೆಯನ್ನು ಕಾರ್ಯಾಚರಣೆ ಮಾಡಿ ಪುರಸಭೆಗೆ ವಶಕ್ಕೆ ಪಡೆಯಲಾಗುವುದು. ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿಯೂ ಸಹ ಚರ್ಚಿಸಲಾಗಿದೆ. ಮಾಸ್ಟರ್ ಪ್ಲ್ಯಾನ್ ಪಟ್ಟಣವನ್ನಾಗಿ ಮಾಡಲು ಪ್ರಾರಂಭಿಸಿದ್ದೇವೆ. ದೂರುದಾರರು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿಲ್ಲವೆಂದು ಹೇಳಿದರು.
ವರದಿ : ವಿಜಯ ವಾಜಂತ್ರಿ


Social Plugin