ಹಡಗಿನಾಳ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ !
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಗೋಕಾಕ :ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ವಿಠ್ಠಲ ಆಡಿನವರ ಅಭಿಮಾನಿ ಬಳಗದ ವತಿಯಿಂದ ಗ್ರಾಮದಲ್ಲಿ ಸ್ವಚ್ಛತೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದಾಗಟ್ಟಿ ಗ್ರಾಮ ಪಂಚಾಯತಿ ಹಾಡಿಗನಾಳ ಗ್ರಾಮದಲ್ಲಿ ವಿಠ್ಠಲ ಭೀಮಪ್ಪ ಆಡಿನ್ ಅವರ ಅಭಿಮಾನಿ ಬಳಗ ದಿಂದ ಗ್ರಾಮ ಸ್ವಚ್ಛತೆ ಊರಿನ ಚರಂಡಿಗಳು ರಸ್ತೆಗಳಿಗೆ ಡಿಡಿಟಿ ಪೌಡರ್ ಹೋಗಲಾಗಿದೆ. ನಂತರ ಸಾನಿಟಿಜರ್ ಸಿಂಪಡನೆ ಮಾಡಿ ಜನರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಶಿಕಾಂತ್ ಹನುಮಂತ ಕಲ್ಲೋಳಿ ಹಾಗೂ ವಿಠ್ಠಲ್ ಭೀಮಪ್ಪ ಆಡಿನ್ ಅವರ ಅಭಿಮಾನಿ ಬಳಗದ ಅನೇಕ ಯುವಕರು ಉಪಸ್ಥಿತರಿದ್ದರು.