ತೇರದಾಳದ ಪುರಸಭೆ ನೂತನ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ತಿಳಿದು ದಾಳಿ ಮಾಡಿ ತರಾಟೆಗೆ ತಗೆದುಕೊಂಡ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ.

ವರದಿ : ವಿಜಯ ವಾಜಂತ್ರಿ

 ಸರಕಾರಿ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ದಿಢೀರ ಮುಖ್ಯಾಧಿಕಾರಿ ದಾಳಿ

ತೇರದಾಳ : ಪುರಸಭೆ ನೂತನ ಕಟ್ಟಡದಲ್ಲಿ ಸಾಯಂಕಾಲದ ವೇಳೆಯಲ್ಲಿ ಮಧ್ಯ ವೆಸನಿಗಳು ಹಾಗೂ ಮಧ್ಯಾನದಲ್ಲಿ ಜೂಜುಕೋರರು ತಮ್ಮ ಅಡ್ಡೆಯನ್ನಾಗಿ ಪುರಸಭೆ ನೂತನ ಕಟ್ಟಡವನ್ನು ಮಾಡಿಕೊಂಡಿದ್ದನ್ನು ತಿಳಿದು ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರು ದಾಳಿ ನಡೆಸಿ ಅಲ್ಲಿದ್ದ ಮಧ್ಯವೆಸನಿಗಳನ್ನು ತರಾಟೆಗೆ ತಗೆದುಕೊಂಡರು.


  ಪುರಸಭೆ ನೂತನ ಕಟ್ಟಡದಲ್ಲಿ ಮಧ್ಯ ವೆಸನಿಗಳು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡು ತಮ್ಮ ಚಟುವಟಿಕೆಯನ್ನು ದಿನಾಲು ಸಾಯಂಕಾಲ ನಡೆಸುತ್ತಿದ್ದರು. ಇದು ಲಾಕೌಡೌನ್ ಪ್ರಾರಂಭವಾದಾಗ ಎಲ್ಲ ಮಧ್ಯದ ಅಂಗಡಿಗಳು ಬಂದ್ ಆಗಿದ್ದವು. ಆ ಸಂದರ್ಭದಲ್ಲಿ ಇವರು ಈ ನೂತನ ಕಟ್ಟಡವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಈ ಸುದ್ದಿಯನ್ನು ತಿಳಿದ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರು ದಿಢೀರಾಗಿ ಬುಧುವಾರ ಸಾಯಂಕಾಲ ನೂತನ ಕಟ್ಡಕ್ಕೆ ದಾಳಿ ಮಾಡಿ ಅಲ್ಲಿ ತಮ್ಮ ಚಟುವಟಿಕೆ ನಡೆಸಿರುವ ಮದ್ಯವೆಸನಿಗಳನ್ನು ತರಾಟೆಗೆ ತಗೆದುಕೊಂಡು ಖಡಕ್ಕಾಗಿ ತಾಕೀತು ಮಾಡಿದರು.

  ಇನ್ನೂ ಯಾರಾದರು ಖಾಲಿ ಬಿದ್ದಿರುವ ಸರಕಾರಿ ಅರೆ ಸರಕಾರಿ ಕಟ್ಟಡಗಳಲ್ಲಿ ಮದ್ಯಪಾನ ಮಾಡುವುದಾಗಲಿ ಜೂಜಾಟ ಆಡುವುದಾಗಲಿ ಕಂಡು ಬಂದರೆ ಅವರ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವುದಾಗುವುದು. ಸರಕಾರಿ ಕಟ್ಟಡಗಳು ನಮ್ಮ ಸ್ವಂತ ಕಟ್ಟಡಗಳಿದ್ದಂತೆ. ಅವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದನ್ನು ಬಿಟ್ಟು ಜೂಜು ಕೇಂದ್ರವಾಗಲಿ, ಮದ್ಯಪಾನ ಮಾಡಲು ಸ್ಥಳವನ್ನಾಗಿ ಮಾಡಿಕೊಳ್ಳುವುದು ತಪ್ಪು ಆದ್ದರಿಂದ ಇನ್ನೂ ಮುಂದೆ ಯಾರು ಇಂತಹ ಕಟ್ಟಡಗಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ತಿಳಿಸಿದ್ದಾರೆ.

  ಅರ್ಧಕ್ಕೆ ನಿಂತಿರುವ ನೂತನ ಕಟ್ಟಡವನ್ನು ಅತೀ ಶೀಘ್ರದಲ್ಲಿಯೇ ಕಟ್ಟಡದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಈ ಕುರಿತು ಸಂಭಂದಿಸಿದ ಇಲಾಖೆಗೆ ಈ ಕಟ್ಟಡದ ಬಗ್ಗೆ ಮಾತನಾಡಿದ್ದೇನೆ. ಅಧಿಕಾರಿಗಳು ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.