ಪೊಲೀಸ್ ಪೇದೆ ಕಪಾಳಕ್ಕೆ ಹೊಡೆದ ಪುಡಿ ರೌಡಿ ಬೆಳಗಾವಿ ಪೊಲೀಸರು ಫುಲ್ ಗರಂ..
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ- ನಿನ್ನೆ ರಾತ್ರಿ ಹೊತ್ತು ಆಟೋರಿಕ್ಷಾದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಯುವಕರಿಗೆ ಮನೆಗೆ ಹೋಗುವಂತೆ ಸೂಚಿಸಿದ ಪೊಲೀಸ್ ಪೇದೆಗಳ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿದ ಘಟನೆ ಬೆಳಗಾವಿ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ. ಆ ಮೇಲೆ ಪೊಲೀಸರು ಬರುತ್ತಿದ್ದಂತೆ ರಿಕ್ಷಾದಲ್ಲಿದ್ದ ಕೆಲವು ಯುವಕರು ಮನೆಗೆ ಓಡಿ ಹೋಗಿದ್ದಾರೆ. ಆದರೆ ಇಬ್ಬರೂ ಯುವಕರು ಪೊಲೀಸರ ಜೊತೆಗೆ ವಾದಕ್ಕಿಳಿದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಯುವಕರು ಪೊಲೀಸರ ವಾದ ಶುರು ಮಾಡುತ್ತಿದ್ದಂತೆ ಅಲ್ಲಿ ಯುವಕರ ಗುಂಪು ಜಮಾವಣೆ ಆಗಿದೆ ಎಲ್ಲರೂ ಸೇರಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ದರ್ಬಾರ್ ಗಲ್ಲಿಯಲ್ಲಿ ನಡೆದ ಘಟನಾವಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಸಿಸಿಟಿವಿ ದೃಶ್ಯಗಳನ್ನು ದೃಶ್ಯಗಳನ್ನು ಆದರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊರೋನಾ ಲಾಕ್ಡೌನ್ ಸಮಯದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಚುರುಕಿನಿಂದ ಆರಂಭಗೊಂಡಿದೆ.