ತೇರದಾಳ : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ಕೊಠಡಿ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಶಾಸಕರು - ಸಿದ್ದು ಸವದಿ
ವರದಿ : ವಿಜಯ ವಾಜಂತ್ರಿ 

   ತೇರದಾಳ : ಇಂದು ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2019-20 ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ  ಮರಣೋತ್ತರ ಪರೀಕ್ಷೆ ಮಾಡುವ ಕೊಠಡಿ ನಿರ್ಮಾಣದ ಭೂಮಿ ಪೂಜೆಯನ್ನು ತೇರದಾಳ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಸಿದ್ದು ಕ ಸವದಿ ರವರು ನೆರವೇರಿಸಿದರು.
 ಈ ಸಂದರ್ಭದಲ್ಲಿ ತೇರದಾಳ ಬಿಜೆಪಿ ನಗರ ಘಟಕದ ಅಧ್ಯಕ್ಷರು ಮಹಾವೀರ ಕೊಕಟನೂರ, ತೇರದಾಳ ಬಿಜೆಪಿ ನಗರ ಪ್ರಭಾರಿ ಅಧ್ಯಕ್ಷರು ರಾಮಣ್ಣ ಹಿಡಕಲ್, ಬಾಳು ದೇಶಪಾಂಡೆ, ಸುರೇಶ ರೇಣಕೆ, ವಿರಾಜ್ ಬಂಕಾಪುರ, ಶಂಕರ ಕುಂಬಾರ, ಲಕ್ಷ್ಮಣ ನಾಯಕ್, ಸಂತೋಷ ಜಮಖಂಡಿ, ಸದಾಶಿವ ಹೊಸಮನಿ, ವಿನಾಯಕ ಬಂಕಾಪುರ್ಮು, ಮುನ್ನಾ ತಹಶೀಲ್ದಾರ್, ಆನಂದ್ ಚಮಕೇರಿ, ಭೀಮಶಿ ಹಿರೇಕುರುಬರ ಇನ್ನಿತರರು ಉಪಸ್ಥಿತರಿದ್ದರು.