*ನಿಮ್ಮ ಹಣೆಬರಹ ಜನತೆ ನೋಡಿದ್ದಾಗಿದೆ*
ಕೊರೊನಾಗೆ ಹೆದರಿ ಬೆಂಗಳೂರಿನ ಮನೆಯಲ್ಲಿ ಕುಳಿತು ಅದೇಗೆ ನೇಕಾರರ ಪರ ಕಾಳಜಿ ವಹಿಸಿದ್ದೀರಿ? ನೇಕಾರರ ಕಾರ್ಯ ಮಾಡಿದ್ದೀರಿ? ಸಚಿವರಿದ್ದಾಗಲೇ ಏನು ಮಾಡದ ನೀವು ತೀವ್ರ ಸಂಕಷ್ಟದ ಸಮಯದಲ್ಲಿ ಮಾಡಿದ್ದಾದರೂ ಏನು? ನಿಮ್ಮ ಹಣೆಬರಹ ಜನತೆಗೆ ಗೊತ್ತಿದೆ ಹೀಗೆ ಪುಂಕಾನುಪುಂಕವಾಗಿ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ತೇರದಾಳ ಶಾಸಕ ಸಿದ್ದು ಸವದಿ ಹರಿಹಾಯ್ದ ಘಟನೆ ನಡೆಯಿತು.
ಬನಹಟ್ಟಿಯಲ್ಲಿ ಮಾತನಾಡಿದ ಅವರು ಅಧಿವೇಶನದಲ್ಲಿಯೂ ಆಡಳಿತ ಸರ್ಕಾರವಿದ್ದರೂ ನೇಕಾರರಿಗೆ ಅನ್ಯಾಯವಾದ ಸಂದರ್ಭ ಸಭೆಯ ಗಮನ ಸೆಲೆದಿದ್ದೇನೆ. ಸಮುದಾಯಕ್ಕೆ ಅನ್ಯಾಯವಾದರೆ ಸಹಿಸೋಲ್ಲ. ಇದೀಗ ಮುಖ್ಯಮಂತ್ರಿಯವರೊಂದಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡು ಡಿಸಿಎಂ ಗೋವಿಂದ ಕಾರಜೋಳರೊಂದಿಗೆ ಮಾತುಕತೆ ಮೂಲಕ ಪ್ರತಿ ನೇಕಾರನಿಗೆ ೩ ಸಾವಿರ ರೂ. ಸಹಾಯ ಧನ ಒದಗಿಸಿದೆ. ನಾವೇ ಮಾಡಿಸಿದ್ದು ಎಂದುಪೊಳ್ಳು ಹೇಳಿಕೆ ನೀಡುತ್ತಿರುವ ಉಮಾಶ್ರೀಯವರ ಕ್ರಮ ಖಂಡನೆ ಎಂದರು.
ಸಾಲಮನ್ನಾಕ್ಕೆ ನೇಕಾರರ ಮುಂಗಡ ಸಾಲ(ಕ್ಯಾಶ್ ಕ್ರೆಡಿಟ್)ದವರಿಗೂ ಶೀಘ್ರವೇ ೧ ಲಕ್ಷ ರೂ.ದಷ್ಟು ಸಾಲ ಮನ್ನಾ ಕಾರ್ಯ ನಡೆಯುತ್ತಿದೆ. ನೇಕಾರರಲ್ಲಿ ಯಾವದೇ ಅನುಮಾನಬೇಡವೆಂದರು.
ನೇಕಾರರಿಗೆ ಸಹಾಯ ಧನ ಬಿಡುಗಡೆ ಮಾಡುವಲ್ಲಿ ಕಾರಣರಾದ ಶಾಸಕ ಸವದಿಯವರನ್ನು ನೇಕಾರ ಮುಖಂಡರು ಹಾಗು ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು.
ನೀಚ ಹಾಗು ನಾಲಾಯಕ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಪ್ರಾಮಾಣಿಕವಾಗಿ ಸಾರ್ವಜನಿಕರ ಸಹಾಯಕ್ಕೆ ಬರಲಿ ಬದಲಾಗಿ ಪ್ರಚಾರ ನಡೆಸುತ್ತಿರುವದು ನಿಜಕ್ಕೂ ಬೇಸರ ತರುವಂಥದ್ದೆಂದು ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ ತಿಳಿಸಿದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin