ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ, ಹಲವು ರಸ್ತೆಗಳ ಸಂಪರ್ಕ ಕಡಿತ, ಬೋರ್ಗರೆಯುತ್ತಿರುವ ಗೋಕಾಕ ಫಾಲ್ಸ್ ಜಲಪಾತ...
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ: ರಾಜ್ಯಾದಂತ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಅದರಲ್ಲೂ ಗಡಿ ಜಿಲ್ಲೆ ಬೆಳಗಾವಿ ಯಲ್ಲೂ ಮುಂಗಾರು ಮಳೆ ಕಳೆದ 5-6 ದಿನ ದಿಂದ ಎಡೆ ಬಿಡದೆ ವ್ಯಾಪಕ ಮಳೆ ಆಗುತ್ತಿದೆ ಮಳೆಯ ರೌದ್ರ ನರ್ತನ ಇಂದು ಕೂಡ ಮುಂದೆ ವರೆದಿದೆ.
ಕಳೆದ 5-6 ದಿನದಿಂದ ವ್ಯಪಕ ಮಳೆಯಾಗುತ್ತಿರುವದರಿಂದ ಕೃಷ್ಣಾ ನದಿಯ ನೀರು ಹೆಚ್ಚಳ ವಾಗಿದ್ದು ಜಿಲ್ಲೆಯ 7 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು- ಕಲ್ಲೋಳ ಸೇತುವೆ ಸೇರಿದಂತೆ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 7 ಸೇತುವೆಗಳು ಮುಳುಗಡೆಯಾಗಿವೆ.
ಜತ್ರಾಟ- ಭೀವಶಿ, ಭೋಜ- ಕಾರದಗಾ, ಅಕ್ಕೋಳ- ಸಿದ್ನಾಳ, ನಾಗನೂರು- ಗೋಟೂರ, ಹುನ್ನರಗಿ-ಮಮದಾಪೂರ, ಭೋಜವಾಡಿ- ಕುನ್ನೂರ, ಯಡೂರು- ಕಲ್ಲೋಳ ಸೇತುವೆಗಳು‌ ಮುಳುಗಡೆಯಾಗಿದ್ದು, ಈ ಸೇತುವೆಗಳು 14 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಸದ್ಯ ಜನರು ಪರ್ಯಾಯ ಮಾರ್ಗಗಳ‌ ಮೂಲಕ ಸಂಚಾರ ನಡೆಸುತ್ತಿದ್ದಾರೆ. ಹಿಪ್ಪರಗಿ ಬ್ಯಾರೇಜ್​​ನಿಂದ 50ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬೀಡಲಾಗುತ್ತಿದೆ. ನಿನ್ನೆ ಸಂಜೆಯಿಂದ ಅಧಿಕಾರಿಗಳು ನೀರು ಹೊರಬಿಡುತ್ತಿದ್ದಾರೆ. ಪರಿಣಾಮ ನದಿ ತೀರದ ಬರುವ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದ್ದಾರೆ.
*ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಜೆಲ್ಲೆಯ ಜಲಪಾತಗಳು*
ಹೌದು ಸತತವಾಗು ಸುರಿಯುತ್ತಿರುವ ಮುಂಗಾರು ಮಳೆಯಿಂದ ಗಡಿ ಜಿಲ್ಲೆ ಬೆಳಗಾವಿಯ ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ.
 ಅದರಲ್ಲಿ ಗೋಕಾಕ ಜಲಪಾತ ಇದು ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿದ್ದು,ಗೋಕಾಕಿನಿಂದ 10ಕಿ.ಮೀ. ಅಂತರದಲ್ಲಿದೆ. ಗೋಕಾಕ ಜಲಪಾತ ಮೈದುಂಬಿ ಹರಿಯುತ್ತಿದ್ದು,ನೂಡುಗರ ಮೈ ಮನ ಸೆಳೆಯುತ್ತಿದೆ. ಇದರ ಸೊಬಗು ನೋಡಿಗರರಿಗೆ ಆಕರ್ಷಿತಗೊಂಡಿದೆ. ಈ ಜಲಪಾತ 170 ಅಡಿ ಎತ್ತರದಿಂದ ದುಮುಕುತ್ತಿದ್ದು,ಇದರ ಶಬ್ದ ಅಲ್ಲಿರುವ ಹಕ್ಕಿಗಳ ಚೀಲಪಿಲಿ ಹಾಗೂ ಅಲ್ಲಿ ನಿರ್ಮಾಣಗೊಂಡಿರುವ ಈಗಿನ ವಾತಾವರಣ ನಿಜವಾಗಲು ರೋಮಾಂಚನ ಗೊಳಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.ಇದನ್ನು ಕರ್ನಾಟಕದ ನಯಾಗ್ರಹ ಪಾಲ್ಸ್ ಅಂತಾನೂ ಕರೆಯುತ್ತಾರೆ.
     ಹೀಗೆ ಜಿಲ್ಲೆಯ ಗೊಡಚನಮಲ್ಕಿ ಪಾಲ್ಸ್,ದುಪದಾಳ್ ಐ. ಬಿ. ಸೊಗಲ್ ಪಾಲ್ಸ್ ಹಾಗೂ ಇನ್ನು ಅನೇಕ ಪಾಲ್ಸ್ ಗಳು ತುಂಬಿ ಹಾಯಿಯುತ್ತಿದ್ದು,ನೀರಿನ ಆ ಶಬ್ದ,ಹಕ್ಕಿಗಳ ಚಿಲಿಪಿಲಿಯ ಶಬ್ದಗಳು,ಪಾಲ್ಸ್ ಗಳ ಸುತ್ತ ಇರು
ಕಳೆದ 5-6 ದಿನದಿಂದ ವ್ಯಪಕ ಮಳೆಯಾಗುತ್ತಿರುವದರಿಂದ ಕೃಷ್ಣಾ ನದಿಯ ನೀರು ಹೆಚ್ಚಳ ವಾಗಿದ್ದು ಜಿಲ್ಲೆಯ 7 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು- ಕಲ್ಲೋಳ ಸೇತುವೆ ಸೇರಿದಂತೆ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 7 ಸೇತುವೆಗಳು ಮುಳುಗಡೆಯಾಗಿವೆ.
 *ಜಿಲ್ಲೆಯಲ್ಲಿ ಮಳೆಯಿಂದ 7ಸೇತುವೆಗಳು ಜಲಾವೃತ*