*ಅಥಣಿ ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಶ್ರೀಯುತ ದುಂಡಪ್ಪ ಕೋಮಾರ ಸಾಹೇಬರು ಶೇಗುಣಸಿ ಗ್ರಾಮದಲ್ಲಿನ ಕೋರಾನಾ ಪರಿಸ್ಥಿತಿ ನಿರ್ವಹಣೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶೇಗುಣಸಿ ಗ್ರಾಮದ ಪ್ರತಿಷ್ಠಿತ ಹಾಗೂ ಕೃಷಿ ಪ್ರಧಾನ ಮನೆತನವಾದ ಕಲ್ಲೋಳ್ಳಿ ಸಹೋದರರ ತೋಟದ ಮನೆಗೆ ಭೇಟಿ ನೀಡಿದರು.ಅವರು ಏರ್ಪಡಿಸಿದ್ದ ಅಲ್ಪೋಪಹಾರವನ್ನು ಸ್ವೀಕರಿಸಿ, ಕಲ್ಲೋಳ್ಳಿ ಸಹೋದರರ ಅವಿಭಕ್ತ ಕುಟುಂಬದ ಬಗ್ಗೆ ತಿಳಿದುಕೊಂಡು ಪ್ರೀತಿಯ ಮಾತುಗಳನ್ನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಲ್ಲೋಳ್ಳಿ ಮನೆತನದ ಹಿರಿಯರು ಹಾಗೂ ಪಿ.ಕೆ.ಪಿ.ಎಸ್ ನಿರ್ದೇಶಕರಾದ ಶ್ರೀ ಮಲ್ಲಪ್ಪ ಕಲ್ಲೋಳ್ಳಿ, ಗ್ರಾಮ ಪಂಚಾಯತ್ ಸದಸ್ಯ ಹಾಗೂ ಯುವ ನಾಯಕರಾದ ಶ್ರೀ ಅವಿನಾಶ್ ಗುರುಸ್ವಾಮಿ, ಯುವ ಉತ್ಸಾಹಿ ಶ್ರೀ ಪ್ರಭು ಕಲ್ಲೋಳ್ಳಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶ್ರೀ ಅವಟಿಯವರು ಉಪಸ್ಥಿತರಿದ್ದರು.*