ಇದು ಕರ್ನಾಟಕದಲ್ಲಿ ಮೊದಲ ಬಾರಿ.
೨೫ ದಿನದಲ್ಲಿ ಆಕ್ಸಿಜನ್ ಘಟಕ ಆರಂಭ.
ಖಾಸಗಿ ಕಂಪನಿ ಮನವೊಲಿಸಿದ ಶಾಸಕ ಅಭಯ.
ಆಕ್ಸಿಜನ ಕೊರತೆಗೆ ಅಂತ್ಯ ಹಾಡಿದ ಅಭಯ ಪಾಟೀಲ.
ನೇಕಾರರ ಹಿತಕ್ಕಾಗಿ ಸಿಎಂ ಜೊತೆಗೆ ಜಗಳಕ್ಕಿಳಿದಿದ್ದರು
ಬೆಳಗಾವಿ: ಮಾಡಬೇಕು ಎನ್ನುವ ಮನಸ್ಸು ಮತ್ತು ಭಲವೊಂದಿದ್ದರೆ ಏನ್ನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಉತ್ತಮ ಉದಾಹರಣೆ.!
ಕ್ಷೇತ್ರದ ಅಷ್ಟೇ ಅಲ್ಲ ಜಿಲ್ಲೆಯ ಜನ .ಆಕ್ಸಿಜನ್ ಕೊರತೆ ಯಿಂದ ನರಳಿ ನರಳಿ ಜೀವ ಬಿಡುತ್ತಿರುವಾಗ ಬರೀ ಆರೋಪ ಪ್ರತ್ಯಾರೋಪ ಮಾಡುತ್ತ ಇವರು ಕುಳಿತು ಕೊಳ್ಳಲಿಲ್ಲ.
ಬದಲಾಗಿ ಜನರ ಸಂಕಷ್ಟ ಪರಿಹಾರಕ್ಕೆ ಸರ್ಕಾರದ ಅನುದಾನವನ್ನೇ ನಂಬಿ ಕೈ ಕಟ್ಟಿಕೊಂಡು ಹುಸಿ ಭರವಸೆ ನೀಡಲಿಲ್ಲ.
ತಮ್ಮದೇ ಆದ ವರ್ಚಸ್ಸಿನ ಮೂಲಕ ಪ್ರತಿಷ್ಠಿತ ಖಾಸಗಿ ಕಂಪನಿಯವರ ಮನವೊಲಿಸಿ ಕೇವಲ 25 ದಿನದಲ್ಲಿ ಜನರಿಗೆ ಅಗತ್ಯವಾಗಿರುವ ಆಕ್ಸಿಜನ ಘಟಕ ಕಾರ್ಯಾರಂಭ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಶಾಸಕ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಜನರಿಗೆ ಸಂಕಷ್ಟ ಎದುರಾದಾಗ ಕೆಲ ಜನಪ್ರತಿನಿಧಿಗಳು ಸರ್ಕಾರದ ಅನುದಾನದ ಮೇಲೆ ಭಾರ ಹಾಕಿ ದಿನ ಕಳೆಯುತ್ತಾರೆ ಎನ್ನುವುದು ಹೊಸದೇನಲ್ಲ.
ಆದರೆ ಸರ್ಕಾರದ ಅನುದಾನ ಬಂದು ಕೆಲಸ ಮುಗಿಯುವಷ್ಟರಲ್ಲಿ ನೋಂದವರು ನಾಲ್ಕು ಜನರ ಮೇಲೆ ಭಾರ ಹಾಕಿ ಇಹಲೋಕ ತ್ಯಜಿಸಿರುತ್ತಾರೆ.
ಬೆಳಗಾವಿ ನಗರದಲ್ಲಿ ತಮ್ಮದೇ ವಿಶಿಷ್ಟ ಕಾರ್ಯಗಳ ಮೂಲಕ ಹೆಸರು ಮಾಡಿದ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಈಗ ಎಲ್ ಆ್ಯಂಡ್ ಟಿ ಖಾಸಗಿ ಸಂಸ್ಥೆಯ ಮೂಲಕ 65 ಲಕ್ಷ ರೂ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಆರಂಭಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಘಟಕವು ಕೇವಲ 25 ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಿದೆ.

Social Plugin