*ಬಾಳೆ ಹಣ್ಣು, ಹಾಲು ಶತಾಯುಷಿಯ ಆಹಾರದ ಗುಟ್ಟು*
ವಯಸ್ಸು ೧೦೯, ಕಣ್ಣು, ಕಿವಿ ಎಲ್ಲವೂ ಸ್ಪಷ್ಟ, ಎಂಥವರನ್ನೂ ನಾಚಿಸುವಂತ ವೇಗದ ನಡಿಗೆ, ನಿತ್ಯ ಆಹಾರ ಎರಡು ಬಾಳೆ ಹಣ್ಣು, ಒಂದು ಲೋಟ ಹಾಲು, ಧ್ಯಾನದೊಂದಿಗೇ ಆರೋಗ್ಯ ಕಾಪಾಡಿಕೊಳ್ಳುವ ಈ ಅಜ್ಜನ ನಿತ್ಯ ಚಟುವಟಿಕೆಯೇ ಬಲು ಅಪರೂಪ.
ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಪರಮಾನಂದ ಮಗದುಮ್ ಎಂಬುವರ ತೋಟದಲ್ಲಿರುವ ಶತಾಯುಷಿ ಮಲ್ಲಿಕಾರ್ಜುನ ಸ್ವಾಮೀಜಿ ಮೂಲತಃ ಧಾರವಾಡದವರೆಂದು ಹೇಳಿದರೂ, ಇವರಿಗೆ ಯಾವದೇ ಮಠ-ಮಂದಿರಗಳಿಲ್ಲ. ಎಲ್ಲಿ ಉಳಿಯುವರೋ ಅಲ್ಲಿ ಭಕ್ತರ ಸಾಲು, ಯಾವದೇ ಬಯಕೆ, ದಾಹವಿಲ್ಲದೆ ಬದುಕುವ ಅಪರೂಪದ ವ್ಯಕ್ತಿ.೧೯೫೮ ರಲ್ಲಿ ಎಂ.ಎ. ಇಂಗ್ಲೀಷ್ ಮುಗಿಸಿ, ಸಂಸ್ಕೃತದಲ್ಲಿ ಪಿಎಚ್‌ಡಿ ಪಡೆದ ಇವರು, ಕಳೆದ ೨೪ ವರ್ಷಗಳಿಂದ ನಿತ್ಯ ಬೆಳಿಗ್ಗೆ ಎರಡು ಬಾಳೆ ಹಣ್ಣು, ಹಾಲು ಸೇವಿಸುವ ಮೂಲಕ ಯಾವದೇ ಮಾತ್ರೆಗಳನ್ನು ತೆಗೆದುಕೊಳ್ಳದೆ ಅನಾರೋಗ್ಯ ಸಂದರ್ಭದಲ್ಲಿಯೂ ನಿತ್ಯ ಧ್ಯಾನದ ರೂಪದಲ್ಲಿ ಆರೋಗ್ಯವಂತರಾಗುವಲ್ಲಿ ವಿಶೇಷತೆ ಹೊಂದಿದವರು. ಧರ್ಮ, ಸಂಸ್ಕಾರ, ಸಂತ್ಸಗಗಳ ತಳಹದಿ ಮೇಲೆ ಬದುಕು ದೀರ್ಘಕಾಲದವರೆಗೂ ಉತ್ಸಾಹದಲ್ಲಿರುವದು. ಭಗವಂತ ನೀಡಿದ್ದನ್ನು ಮಾತ್ರ ಅನುಭವಿಸಿದಾಗ ಸುಂದರ ಬದುಕು ಸಾಧ್ಯ. ಸಾಕಷ್ಟು ಶರಣ-ಸಂತರು ಇಂದಿಗೂ ಬದುಕುವ ಕಲೆಯನ್ನು ಹೇಳುತ್ತಾ ಬಂದಿದ್ದರೆ, ಇದರ ಆಚರಣೆಯಲ್ಲಿದ್ದವರ ಬದುಕು ಮಾತ್ರ ಸಾರ್ಥಕವಾಗುತ್ತಿದೆ. ಕಾರಣ ಎಲ್ಲರೂ ಇದರನ್ವಯದ ಬದುಕಾಗಬೇಕೆಂದರು.ಈ ಬಾರಿ ಲಾಕ್‌ಡೌನ್ ಸಂದರ್ಭ ಆಸಂಗಿ ಗ್ರಾಮದಲ್ಲಿಯೇ ಉಳಿದ ಕಾರಣ ತಮ್ಮ ೧೦೯ವರ್ಷಾಚರಣೆ ಮಾಡಲಾಯಿತು.

Social Plugin