ರಬಕವಿ-ಬನಹಟ್ಟಿಯಲ್ಲಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಹಾಗೂ ಅಂಗಡಿಕಾರರಿಗೆ ಜಾಗೃತಿ ಮೂಡಿಸುವುದರೊಂದಿಗೆ ದಂಡ ವಿಧಿಸಲಾಯಿತು. 
ಮಾಸ್ಕ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ
* ಮಾಸ್ಕ್ ಹಾಕದವರಿಗೆ ಧಂಡ ವಿಧಿಸಿದ ನಗರಸಭೆ ಸಿಬ್ಬಂದಿ
ರಬಕವಿ-ಬನಹಟ್ಟಿ,ಅ24: ಕೊರೊನಾ ಹಿನ್ನಲೆಯಲ್ಲಿ ನಗರಸಭೆ ಸಿಬ್ಬಂದಿ ವರ್ಗದವರು ರಬಕವಿ-ಬನಹಟ್ಟಿ ನಗರಸಭೆಯಾದ್ಯಾಂತ ಜಾಗೃತಿ ಮೂಡಿಸುವುದರ ಜೊತೆಗೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದರು.
ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಅಂಗಡಿಕಾರರು ಮತ್ತು ಸಾರ್ವಜನಿಕರಿಗೆ ಮಾಸ್ಕ್ ಹಾಕುವಂತೆ ತಿಳುವಳಿಕೆ ಹೇಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಶ್ರೀನಿವಾಸ ಜಾಧವ, ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ದಂಡ ಕಡ್ಡಾಯವಾಗಿ ಪಾವತಿಸಬೇಕು. ಮಾಸ್ಕ್ ಧರಿಸುವುದಲ್ಲದೇ ಸರಕಾರದ ನಿರ್ದೇಶನದಂತೆ ಗುಂಪಾಗಿ ಜನ ಸೇರುವುದು ಮಾಡಬಾರದು, ಸಾಮಾಜಿಕ ಅಂತರ ಹಾಘೂ ಸ್ಯಾನಿಟೈಜರ್ ಬಳಕೆ ಕಡ್ಡಾಯ ಎಂದರು. 
ಈ ಸಂದರ್ಭದಲ್ಲಿ ಕಛೇರಿ ವ್ಯವಸ್ಥಾಪಕರಾದ ಬಿ. ಎಂ. ಡಾಂಗೆ, ಹಿರಿಯ ಆರೋಗ್ಯ ನೀರಿಕ್ಷಕರಾದ ಎಂ. ಎಂ. ಮುಘಳಖೋಡ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಜಕುಮಾರ ಹೊಸೂರ, ಸಂಗೀತಾ ಕೋಳಿ, ಇರ್ಫಾನ ಝಾರೆ ಹಾಗೂ ನಗರಸಭೆ ಸಿಬ್ಬಂದಿಗಳು ಇದ್ದರು.