ಬನಹಟ್ಟ್ಲಿ ರಸ್ತೆ ಮತ್ತು ಬೀದಿ ದೀಪಗಳ ಕಂಬ ಹಾಗೂ ವಾಯರ್ ಅಳವಡಿಕೆ ಕಾಮಗಾರಿಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೆರಿಸಿದರು. 

ರಸ್ತೆ ಕಾಮಗಾರಿಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ 
ರಬಕವಿ-ಬನಹಟ್ಟಿ,ಸೆ30: ನಗರಸಭೆ ವ್ಯಾಪ್ತಿಯಲ್ಲಿ ಅವಶ್ಯವಿರುವ ಕಡೆ ಅಗತ್ಯ ರಸ್ತೆ ನಿರ್ಮಾಣ ಕಾಮಗಾರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. 
ಅವರು 2017-18 ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಸಾಮಾನ್ಯ  ಅನುದಾನದಲ್ಲಿ ಬನಹಟ್ಟಿಯ ಜಗದಾಳ ರಸ್ತೆ ಬಸವನ ಗುಡಿಯಿಂದ ಬಡ್ಡೂರ ಮನೆವರೆಗೆ ಹಾಗೂ ವಾರ್ಡ ನಂ. 3 ರ ಲಕ್ಷ್ಮೀ ನಗರದಲ್ಲಿ ತಾಂಡಾ ರಸ್ತೆಯಲ್ಲಿ ಹೊಸದಾಗಿ ಬೀದಿ ದೀಪಗಳ ಕಂಬ ಹಾಗೂ ವಾಯರ್ ಅಳವಡಿಸುವ 5.25 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ನಗರದ ಸೌಂದರ್ಯಕರಣಕ್ಕಾಗಿ ಅಗತ್ಯ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನ ತರುವುದರ ಮೂಲಕ ನಗರಸಭೆಯಾದ್ಯಂತ ಉತ್ತಮ ಕೆಲಸಗಳನ್ನು ಮಾಡಲಾಗುವುದು ಎಂದು ಸವದಿ ತಿಳಿಸಿದರು. 
ಈ ಸಂದರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ಈಶ್ವರ ಪಾಟೀಲ, ನಗರಸಭಾ ಸದಸ್ಯೆ ಗೌರಿ ಮಿಳ್ಳಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಮಲ್ಲಪ್ಪ ಹಂದಿಗುಂದ, ಬಸಪ್ಪ ಚಿಮ್ಮಡ, ಮಲ್ಲಪ್ಪ ಪಾಟೀಲ, ಮಲ್ಲಪ್ಪ ಗೌಡಪ್ಪನವರ, ಭೀಮಪ್ಪ ಪಾಟೀಲ, ಶಿವು ಗುಂಡಿ, ಭೀಮಪ್ಪ ಹಂದಿಗುಂದ ಸೇರಿದಂತೆ ಅನೇಕರು ಇದ್ದರು.