ಬನಹಟ್ಟಿ ಎಸ್‍ಆರ್‍ಎ ಮೈದಾನದಲ್ಲಿ ಶಾಸಕ ಸಿದ್ದು ಸವದಿಯವರು 74 ನೇ ಸ್ವಾತಂತ್ರೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ತಹಸೀಲ್ದಾರ ಪ್ರಶಾಂತ ಚನಗೊಂಡ ಇದ್ದರು.
ಕರೊನಾ ವಾರಿಯರ್ಸ ಆದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಸಿದ್ದು ಸವದಿ, ತಹಸೀಲ್ದಾ ಪ್ರಶಾಂತ ಚನಗೊಂಡ ಇದ್ದರು.
ಸಂವಿಧಾನ ಎಲ್ಲ ಗ್ರಂಥ ಹಾಗೂ ಧರ್ಮಗಳಿಗಿಂತ ಪವಿತ್ರ ಗ್ರಂಥ
ರಬಕವಿ-ಬನಹಟ್ಟಿ,ಅ115: ಎಲ್ಲ ಧರ್ಮ ಹಾಗೂ ಶ್ರೇಷ್ಠ ಗ್ರಂಥಗಳಿಗಿಂತ ಪವಿತ್ರವಾದ ಗ್ರಂಥ ಭಾರತ ದೇಶದ ಸಂವಿದಾನ ವಾಗಿದೆ ಎಂದು ತೇರದಾಳ ವಿಧಾಣ ಸಭಾ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಶನಿವಾರ ಬನಹಟ್ಟಿಯ ಎಸ್‍ಆರ್‍ಎ ಮೃದಾನದಲ್ಲಿ ಜರುಗಿದ 74ನೇ ಸ್ವಾತಂತ್ರೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತಿ ಬೇಧವೆನ್ನದೆ ನಾವೆಲ್ಲರೂ ದೇಶದ ಹಿತಕ್ಕಾಗಿ ಒಂದಾಗಿ ದೇಶಕಟ್ಟೋಣ, ದೇಶದ ಸ್ವಾಂತ್ರಕ್ಕಾಗಿ ಆರುವರೆ ಲಕ್ಷ ನಮ್ಮ ಪೂರ್ವಜರು ಬಲಿದಾನ ಗೈದಿದ್ದಾರೆ. ಅವರ ಜೀವಕ್ಕೆ ಬೆಲೆಕೊಟ್ಟಾದರೂ ದೇಶದ ಒಳಿತಿಗೆ ನಾವೆಲ್ಲರೂ ದುಡಿಯೋಣ. ಉಗ್ರಗಾಮಿಗಳಂತೆ ವರ್ತಿಸುವುದು ಬೇಡಿ, ದೇಶದ ಗಡಿಕಾಯುತ್ತಿರುವ ಯೋಧರ ಸೇವೆಯಿಂದ ನಾವು ಇಂದು ಸ್ವತಂತ್ರ ಜೀವನ ಸಾಗಿಸುತ್ತಿದ್ದೇವೆ. ಅವರಿಲ್ಲದೇ ಹೋದರೆ ಗುಲಾಮಗಿರಿಯಲ್ಲಿ ನಿತ್ಯ ಭಯದ ವಾತಾವರಣದಲ್ಲಿ ಬದುಕಬೇಕಿತ್ತು. ಆದ್ದರಿಂದ ದೇಶಕ್ಕೆ ಒಳ್ಳೆಯದನ್ನು ಮಾಡಲು ಬಾರದಿದ್ದರೂ ಕೇಡು ಬಯಸದೆ ಮುಂದಿನ ಪಿಳಿಗೆಗೆ ಈ ದೇಶವನ್ನು ಹೀಗೆ ಉಳಿಸಿ ಹೋಗೋಣ ಎಂದರು.
ಧ್ವಜಾರೋಹಣ ನೇರವೇರಿಸಿದ ತಹಸೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ನೂತನ ತಾಲೂಕು ಕೇಂದ್ರಕ್ಕೆ ಹೊಸ ಹೊಸ ಕಚೇರಿಗಳು ಜನರ ಸೇವೆಗೆ ಹಂತಹಂತವಾಗಿ ಬರುತ್ತಿದ್ದು, ಕಳೆದ ವರ್ಷ ಪ್ರವಾಹವನ್ನು ಎದುರಿಸಿ ಯಶಸ್ವಿಯಾದ ತಾಲೂಕಾಢಳಿತ ಪ್ರಸಕ್ತ ವರ್ಷ ಕೋವಿಡ್-19ನನ್ನು ಕೂಡಾ ಸಮರ್ಥವಾಗಿ ಎದುರಿಸಿ ರೋಗ ಹರಡದಂತೆ ಹತೋಟಿಗೆ ತರಲು ತಾಲೂಕಾಢಳಿತ ವ್ಯಾಪ್ತಿಯಲ್ಲಿನ ಎಲ್ಲ ಇಲಾಖೆಯ ಸಿಬ್ಬಂದಿ ಅಧಿಕಾರಿಗಳು ಸಹಕರಿಸಿದ್ದಾರೆಂದು ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರೊನಾ ವಾರಿಯರ್ಸಗಳಿಗೆ ತಾಲೂಕಾಢಳತಿದಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ರೈತರ ಬೆಳೆ ವಿಮೆ ಹಾಗೂ ಪರಿಹಾರದ ಕುರಿತಾದ ಮೋಬೈಲ ಯಾಪ್‍ನ್ನು ಶಾಸಕ ಸಿದ್ದು ಸವದಿಯವರು ಬಿಡುಗಡೆ ಮಾಡಿದರು. ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ರವಿಶಂಕರ ಬಿದರಿ, ಎಸ್. ಎಂ. ಬಿರಾದಾರ ಇದ್ದರು.
ಇದೇ ಸಂಧರ್ಭದಲ್ಲಿ ಸಿಪಿಐ ಜಿ. ಕರುಣೇಶಗೌಡ, ತೇರದಾಳ ಪಿಎಸ್‍ಐ ವಿಜಯ ಕಾಂಬಳೆ, ಜಿಪಂ ಸದಸ್ಯ ಪುಂಡಲಿಕ ಪಾಲಬಾಂವಿ, ಪರಸುರಾಮ ಬಸವ್ವಗೊಳ, ಬಸವರಾಜ ಬಿಜ್ಜರಗಿ, ಪೌರಾಯುಕ್ತ ಶ್ರೀನಿವಾಸ ಜಾಧವ, ತಾಪಂ ಎಇಒ ಸಂಜಯ ಹಿಪ್ಪರಗಿ, ನಗರಸಭೆ ಸದಸ್ಯರಾದ ಸಂಜು ತೆಗ್ಗಿ, ಗೌರಿ ಮಿಳ್ಳಿ, ವಿಜಯ ಕಲಾಲ, ಯುನುಸ ಚೌಗಲಾ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಈಶ್ವರ ನಾಗರಾಳ ಸೇರಿದಂತೆ ಅನೇಕರಿದ್ದರು.
ಜಾಹೀರಾತು...
Social Plugin