ಕನ್ನಡಿಗರ ಮೇಲೆ ಹಾಕಿರುವ ಪ್ರಕರಣವನ್ನು ಕೈ ಬಿಡುವಂತೆ ಆಗ್ರಹಿಸಿ ತೇರದಾಳದ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ ಮೂಲಕ ರಾಜ್ಯಪಾಲರಿಗೆ ಪಟ್ಟಣದ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ತೇರದಾಳ : ಬೆಳಗಾವಿಯ ಪೀರನವಾಡಿಯಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ವಿಷಯದಲ್ಲಿ ವಿನಾಕಾರಣ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ರಾಜ್ಯದಿಂದ ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿ ಇಂದು ಪಟ್ಟಣದ ಉಪತಹಶೀಲ್ದಾರರ ಎಸ್.ಬಿ.ಮಾಯನ್ನವರ ಮುಖಾಂತರ ರಾಜ್ಯಪಾಲರಿಗೆ ಪಟ್ಟಣದ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಸಂಗೋಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಬೆಳಗಾವಿ ಎಂಇಎಸ್ ಸಂಘಟನೆಯವರು ವಿನಾಕಾರಣ ಪೋಲಿಸರು ಹಾಗೂ ಕನ್ನಡಿಗರ ಮೇಲೆ ಕಲ್ಲು ತೂರಟ ಮಾಡಿದ್ದು ಖಂಡನೀಯ. ಕನ್ನಡಿಗರ ಮೇಲೆ ದಾಖಲಾದ ಎಫ್‍ಐಆರ್‍ನ್ನು ರಾಜ್ಯ ಸರಕಾರ ಕೂಡಲೆ ರದ್ದು ಮಾಡಿ ಎಂಇಎಸ್ ಸಂಘಟನೆಯನ್ನು ರದ್ದು ಪಡಿಸಬೇಕು ಮತ್ತು ಎಂಇಎಸ್ ಮುಖಂಡರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ಪ್ರವೀಣ ನಾಡಗೌಡ ಮಾತನಾಡಿ ಕನ್ನಡ ನಾಡು ನುಡಿಗಾಗಿ ಹಲವಾರು ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಂತವರಲ್ಲಿ ವೀರ ಸಂಗೋಳ್ಳಿ ರಾಯಣ್ಣ ಒಬ್ಬರು. ರಾಯಣ್ಣನ ಮೂರ್ತಿ ಆಗಲಿ ಬೆಳಗಾವಿ ಗಡಿಯ ಬಗ್ಗೆ ಕನ್ನಡಿಗರ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತೇರದಾಳ ಘಟಕದ ಅಧ್ಯಕ್ಷ ಮೈನೋದ್ದೀನ ಮೋಕಾಶಿ, ರುಸ್ತುಂ ನಿಪ್ಪಾನಿ, ಫಜಲ್ ಅತಾರಾವುತ್, ರಿಯಾಜ ಹನಗಂಡಿ, ರಾಜು ನದಾಫ, ವಿಠ್ಠಲ ಸಿಂಗೆ, ದಯಾನಂದ ಹೊಸಕೋಟಿ, ನಿಸಾರ ಕುಂದರಗಿ, ಅಂಬಿಕಾ ಕೆಳಗಡೆ, ರಾಜಶ್ರೀ ಹುನಶ್ಯಾಳಮಠ, ಹಬೀಬ ಅತ್ತಾರ ಸೇರಿದಂತೆ ಇನ್ನು ಹಲವರಿದ್ದರು.
Social Plugin