ವರದಿ: ಪ್ರಭು ಜೈನರ

ತೇರದಾಳ: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಸಡಿಲಿಕೆ ನೀಡಿದ್ದು ಕೇವಲ ಅಗತ್ಯ ವಸ್ತುಗಳ ಖರೀಧಿಮಾಡಲು ಮಾತ್ರ, ಆದರೆ ಪಟ್ಟಣದ ಜನತೆ ಅದರ ದುರುಪಯೋಗವನ್ನು ಮಾಡುತ್ತಾ, ಸಾಮಾಜಿಕ ಅಂತರವನ್ನು ಮರೆತು ದಿನನಿತ್ಯ ವ್ಯಾಪಾರ ವಹಿವಾಟು ಮಾಡುತ್ತಾ ಇದ್ದಾರೆ. ಈಗಾಗಲೆ ಈ ಸುದ್ದಿಯನ್ನು ಎರಡನೇ ಬಾರಿ ಪ್ರಕಟಿಸುತ್ತಿದ್ದು, ಯಾರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಹಿಂದೆ ಈ ಸುದ್ದಿಯನ್ನು ದಿನಾಂಕ 24/4/2020ರಂದು ಪ್ರಕಟಿಸಲಾಗಿತ್ತು ಆದರೂ ಜನ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ ಯಾಕೆಂದರೆ ಪ್ರತಿದಿನ ಈ ರಿತೀಯ ವ್ಯಾಪಾರ ವಹಿವಾಟು ನಡೆಯುತ್ತಲೆ ಇದೆ. ತರಕಾರಿಗಳನ್ನು ಮನೆಮನೆಗೆ ಹೋಗಿ ಮಾರಾಟ ಮಾಡಲು ತಾಲೂಕಾ ಆಡಳಿತ ಹೇಳಿದೆ ಆದರೆ ತರಕಾರಿಗಳನ್ನು ಪೇಟೆ ಬೀದಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದ ದೃಶ್ಯ ಪ್ರತಿದಿನ ಕಂಡುಬರುತ್ತಲೇ ಇದೆ. ಆಗಾಗ ಪೊಲೀಸ ಇಲಾಖೆಯವರು ಮತ್ತು ಪುರಸಭೆಯ ಸಿಬ್ಬಂಧಿಯವರು ಬಂದು ಎಚ್ಚರಿಕೆ ನೀಡಿದರು ಜನ ಮಾತ್ರ ಕ್ಯಾರೆ ಎನ್ನುತ್ತಿಲ್ಲ, ಪೊಲೀಸರು ಬಂದಾಗ ಓಡಿಹೋಗಿ ಮತ್ತೆ ಅವರು ಹೋದ ಮೇಲೆ ವ್ಯಾಪಾರ ವಹಿವಾಟು ಮುಂದುವರೆಸುತ್ತಿದ್ದಾರೆ. ಸಾರ್ವಜನಿಕರೇ ಇನ್ನಾದರೂ ಸಹಕರಿಸಿ ಕೋರೋನಾ ವೈರಸಗೆ ಲಾಕಡೌನ ಸಡಿಲಿಕೆ ಆಗಲಿ ಅಥವಾ ಬೀಗಿಯಾಗಲಿ ಗೊತ್ತಿಲ್ಲ, ಅದಕ್ಕೆ ಗೊತ್ತಿರುವುದು ಒಂದೇ......! "ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಈ ಮಹಾಮಾರಿಯಿಂದ ದೂರವಿರಿ".