ಗಂಟಲು ದ್ರವ ಪರೀಕ್ಷೆ ವಿಳಂಬ: ಕ್ವಾರಂಟೈನ್‍ಲ್ಲಿದ್ದವರಿಗೆ ಕಿರಿಕ್
ರಬಕವಿ-ಬನಹಟ್ಟಿ,ಮೇ31: ಕಳೆದ ಮೇ 5 ರಿಂದ ನಗರದ ಹೊರಲಯಲ್ಲಿರುವ ಬಿಸಿಎಂ ಹಾಸ್ಟೇಲ್ ಹಾಗು ಜಗದಾಳ ವಸತಿ ಶಾಲೆಯಲ್ಲಿರುವ 89 ಜನರ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆ ವಿಳಂಬವಾಗುತ್ತಿರುವ ಹಿನ್ನಲೆ ಸಾಂಸ್ಥಿಕ ಕ್ವಾರಂಟೈನ್‍ಲ್ಲಿದ್ದವರ ಗೋಳು ಹೇಳತೀರದಾಗಿದೆ.
ಕಳೆದ ದಿ.23, 24 ರಂದು ಕಳಿಸಲಾದ ಸ್ವ್ಯಾಬ್ ಪರೀಕ್ಷೆಯ ಫಲಿತಾಂಶ ವಿಳಂಬವಾಗಿದೆ. ಇದರ ನಂತರದ ದಿನಗಳ ಪರೀಕ್ಷೆಗಳ ಫಲಿತಾಂಶ ಬಂದಿದ್ದು, ಅವರೆಲ್ಲರನ್ನೂ ಬಿಡುಗಡೆಗೊಳಿಸಲಾಗಿದ್ದು, ಉತ್ತರ ಕಾಯುತ್ತಿದ್ದೇವೆ ಎನ್ನುತ್ತಾರೆ ತಹಶೀಲ್ದಾರ ಪ್ರಶಾಂತ ಚನಗೊಂಡ.
ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಪರೀಕ್ಷೆಗೆ ಕಳಿಸಲಾಗಿತ್ತು. ಒಂದೆಡೆ ಸಮಸ್ಯೆಯುಂಟಾಗಿರುವ ಹಿನ್ನಲೆ ಫಲಿತಾಂಶ ವಿಳಂಬವಾಗುವಲ್ಲಿ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರೆ, ಕ್ವಾರಂಟೈನ್‍ಲ್ಲಿದ್ದವರು ದಿನಗಳು ಮುಗಿದರೂ ಇನ್ನೂ ಎಷ್ಟು ದಿನ ಉಳಿಯುವದೆಂಬ ಆತಂಕವಾಗಿದೆ.