ರಬಕವಿ-ಬನಹಟ್ಟಿಯ ಅಶೋಕ ಕಾಲನಿ, ನೀರಿನ ಟಾಕಿ, ಲಂಬಾಣಿ ತಾಂಡಾ ಸೇರಿದಂತೆ ಅನೇಕ ಕಡೆ ಸಂಕಷ್ಟ ಎದುರಿಸುತ್ತಿದ್ದ ಕುಟುಂಬಗಳಿಗೆ ಬಾಳೆ ಹಣ್ಣುಗಳನ್ನು ಮಲ್ಲು ಭದ್ರನ್ನವರ, ರಾಜು ಬಾಣಕಾರ, ಗುರು ಹೊರಟ್ಟಿ ಹಂಚಿದರು.
 ಬನಹಟ್ಟಿಯ ಪರಮೇಶ್ವರ ಮಹಿಳಾ ಸೊಸೈಟಿಯಿಂದ ಕೂಲಿ ನೇಕಾರರಿಗೆ, ಕೆಎಚ್‍ಡಿಸಿ, ಲಂಬಾಣಿ ತಾಂಡಾ ಸೇರಿದಂತೆ ವಿವಿಧ 300 ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ಪೊಟ್ಟಣ ಹಾಗು ಮಾಸ್ಕ್‍ಗಳನ್ನು ಎಎಸ್‍ಐ ಬಾಬಾಗೌಡ ಪಾಟೀಲ ಹಾಗು ಅಧ್ಯಕ್ಷೆ ಮಾಲಾ ನಿಜಲಿಂಗಪ್ಪ ಬಾವಲತ್ತಿಯವರ ಸಮ್ಮುಖದಲ್ಲಿ ವಿತರಿಸಲಾಯಿತು.